ಕಾವೇರಿ ಮಡಿಲು ಸೇರಿದ ನಟಿ ಸ್ಪಂದನಾ ಅಸ್ಥಿ; ಕುಟುಂಬ ಭಾವುಕ

ಕಾವೇರಿ ಮಡಿಲು ಸೇರಿದ ನಟಿ ಸ್ಪಂದನಾ ಅಸ್ಥಿ; ಕುಟುಂಬ ಭಾವುಕ

ರಾಜೇಶ್ ದುಗ್ಗುಮನೆ
|

Updated on: Aug 12, 2023 | 9:33 AM

ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಹಾದು ಹೋದ ಕಾವೇರಿ ನದಿಯಲ್ಲಿ ನಟಿ ಸ್ಪಂದನಾ ಅವರ ಅಸ್ಥಿಯನ್ನು ಕುಟುಂಬದವರು ವಿಸರ್ಜನೆ ಮಾಡಿದ್ದಾರೆ. ಇಲ್ಲಿ ಅಸ್ಥಿ ಬಿಟ್ಟರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಹಿಂದೂಗಳಲ್ಲಿ ಇದೆ.

ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಹಾದು ಹೋದ ಕಾವೇರಿ ನದಿಯಲ್ಲಿ ನಟಿ ಸ್ಪಂದನಾ (Spandana) ಅವರ ಅಸ್ಥಿಯನ್ನು ಕುಟುಂಬದವರು ವಿಸರ್ಜನೆ ಮಾಡಿದ್ದಾರೆ. ಇಲ್ಲಿ ಅಸ್ಥಿ ಬಿಟ್ಟರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಹಿಂದೂಗಳಲ್ಲಿ ಇದೆ. ಸ್ಪಂದನಾ ಅವರು ಕುಟುಂಬದವರ ಜೊತೆ ಬ್ಯಾಕಾಂಕ್​ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಪ್ರಯೋಜನ ಆಗಿಲ್ಲ. ಆಗಸ್ಟ್ 9ರಂದು ಹರಿಶ್ಚಂದ್ರಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಾಯಿತು. ಆಗಸ್ಟ್ 11ರಂದು ಹಾಲುತುಪ್ಪ ಬಿಟ್ಟು, ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ