ಆಕೆ ಆರೋಗ್ಯವಂತೆ, ಧೈರ್ಯವಂತೆ: ಸ್ಪಂದನಾರನ್ನು ನೆನಪಿಸಿಕೊಂಡ ಸೋದರ ಮಾವ

|

Updated on: Aug 16, 2023 | 8:05 PM

Spandana: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾರ 11ನೇ ದಿನ ವಿಧಿ-ವಿಧಾನಗಳನ್ನು ಇಂದು ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಸೋದರ ಮಾವ ಸ್ಪಂದನಾರನ್ನು ನೆನಪಿಸಿಕೊಂಡಿದ್ದು ಹೀಗೆ

ವಿಜಯ್ ರಾಘವೇಂದ್ರರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನ ಹೊಂದಿ 11 ದಿನಗಳಾಗಿದ್ದು, ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಹಾಗೂ ಸ್ಪಂದನಾರ ತವರು ಮನೆಯಲ್ಲಿ ಇಂದು 11 ದಿನದ ಕಾರ್ಯಗಳು ಸಂಪನ್ನಗೊಂಡಿವೆ. 11 ದಿನದ ಕಾರ್ಯದಂದು ಬಂಧು, ಬಾಂಧವರಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ಹಲವು ವಿಧಿ-ವಿಧಾನಗಳನ್ನು ನೆರವೇರಿಸಲಾಗಿದೆ. ಈ ದುಃಖದ ಸಮಯದಲ್ಲಿ ಸ್ಪಂದನಾರ ಸೋದರ ಮಾವ ಸ್ಪಂದನಾರ ಬಗ್ಗೆ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ