ಸೂರ್ಯ ಮತ್ತು ಚಂದ್ರಗ್ರಹಣಗಳಂದು ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಹವನಗಳು ನಡೆಯುತ್ತವೆ
ದೇಗುಲದ ವೈಶಿಷ್ಟ್ಯತೆ ಎಂದರೆ, ಅದರ ಸುತ್ತಲೂ ಆಲದ ಮರಗಳಿವೆ. ಸೂರ್ಯ ಮತ್ತು ಚಂದ್ರಗ್ರಹಣ ಸಂದರ್ಭಗಳಲ್ಲಿ ಭಕ್ತರು ಈ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸುತ್ತಾರೆ ಜೊತೆಗೆ ಭಜನೆಗಳನ್ನೂ ಏರ್ಪಡಿಸಲಾಗುತ್ತದೆ.
ಮುಂಬೈ-ಕರ್ನಾಟಕ ಪ್ರದೇಶದ ದೊಡ್ಡ ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಹುಬ್ಬಳ್ಳಿಯೂ ಒಂದು. ಇದು ಅನೇಕ ಋಷಿಮುನಿಗಳ, ಸಾಧು-ಸಂತರ ತಪೋಭೂಮಿ ಕೂಡ ಹೌದು. ಹುಬ್ಬಳ್ಳಿ ನಗರ ಮೊದಲು ಹೂ ಬಳ್ಳಿ ಅನಿಸಿಕೊಂಡಿತ್ತು. ಬರುಬರುತ್ತಾ ಅದು ಹುಬ್ಬಳ್ಳಿಯಾಗಿ ಪರಿವರ್ತನೆಗೊಂಡಿತು. ಓಕೆ, ನೀವು ಹುಬ್ಬಳ್ಳ್ಳಿಗೆ ಭೇಟಿ ನೀಡಿದ್ದರೆ, ಅಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನವನ್ನು ಸಂದರ್ಶಿಸಿರುತ್ತೀರಿ. ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಆರೂಢ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ ಹಾಗೂ ಇಲ್ಲೇ ಸಿದ್ದಾರೂಢ ಮಹಾಮುನಿಗಳು ತಪಸ್ಸಿಗೆ ಕೂತಿದ್ದರು. ಈಶ್ವರ ಗುಡಿಯ ಇತಿಹಾಸವನ್ನು ನೋಡಿದ್ದೇಯಾದರೆ, ಅದು ಅಸ್ತಿತ್ವಕ್ಕೆ ಬಂದಿದ್ದು ಚಾಳುಕ್ಯರ ಕಾಲದಲ್ಲಿ ಮತ್ತು ಜೀರ್ಣೋದ್ಧಾರ ಕಾರ್ಯವೂ ಅವರ ಕಾಲದಲ್ಲಿಯೇ ನಡೆಯಿತು.
ಹುಬ್ಬಳ್ಳಿ-ಧಾರವಾಡ ಪ್ರಾಂತ್ಯದಲ್ಲಿ ಮಳೆ-ಬೆಳೆಗೆ ಕೊರತೆಯಿಲ್ಲ, ಇದು ಸುಭಿಕ್ಷ ನಾಡು ಅಂತ ಹೇಳುತ್ತಾರೆ. ಈಶ್ವರ ದೇವಸ್ಥಾನವು ಪ್ರತಿನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ದೇಗುಲದ ವೈಶಿಷ್ಟ್ಯತೆ ಎಂದರೆ, ಅದರ ಸುತ್ತಲೂ ಆಲದ ಮರಗಳಿವೆ. ಸೂರ್ಯ ಮತ್ತು ಚಂದ್ರಗ್ರಹಣ ಸಂದರ್ಭಗಳಲ್ಲಿ ಭಕ್ತರು ಈ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸುತ್ತಾರೆ ಜೊತೆಗೆ ಭಜನೆಗಳನ್ನೂ ಏರ್ಪಡಿಸಲಾಗುತ್ತದೆ.
ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ದರ್ಶನ ಮಾಡುವುದರಿಂದ ಕಷ್ಟಕಾರ್ಪಣ್ಯಗಳು ತೀರುತ್ತವೆ, ಕಾಯಿಲೆಗಳು ವಾಸಿಯಾಗುತ್ತವೆ ಮತ್ತು ಇಷ್ಟಾರ್ಥಗಳು ನೆರವೇರುತ್ತವೆ ಅಂತ ಭಕ್ತರು ಹೇಳುತ್ತಾರೆ.
ಇದನ್ನೂ ಓದಿ: IPL 2021: ಪಂದ್ಯ ಸೋತರೂ ಅದ್ಭುತ ಫೀಲ್ಡಿಂಗ್ನಿಂದ ಅಭಿಮಾನಿಗಳ ಹೃದಯ ಗೆದ್ದ ಹೈದರಾಬಾದ್; ವಿಡಿಯೋ ನೋಡಿ