Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ಹನುಮಾನ್ ಚಾಲೀಸಾ ಎಂಬುದು 40 ಪದ್ಯಗಳನ್ನು ಹೊಂದಿರುವ ಒಂದು ಪವಿತ್ರ ಪಠಣವಾಗಿದೆ. 15ನೇ ಶತಮಾನದಲ್ಲಿ ತುಳಸಿದಾಸರು ಇದನ್ನು ರಚಿಸಿದರು. ಇದನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಕಷ್ಟದ ಸಮಯಗಳಲ್ಲಿ, ರೋಗ ಅಥವಾ ದುಷ್ಟಶಕ್ತಿಗಳಿಂದ ಬಳಲುತ್ತಿರುವಾಗ ಹನುಮಾನ್ ಚಾಲೀಸಾ ಪಠಿಸುವುದು ಒಳ್ಳೆಯದು ಎನ್ನಲಾಗಿದೆ. ಇದರ ಮಹತ್ವದ ಬಗ್ಗೆ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
ಹನುಮಾನ್ ಚಾಲೀಸಾ ಬಗ್ಗೆ ನಮಗೆಲ್ಲರಿಗೂ ಗೊತ್ತಲ್ಲವೇ ಕಷ್ಟದಲ್ಲಿದ್ದಾಗ, ಸಂಕಟದಲ್ಲಿದ್ದಾಗ, ರೋಗ ರುಜಿನಗಳಿಂದ ನಾವು ಎಲ್ಲೋ ಒಂದು ಕಡೆ ಸಂಕಷ್ಟದಲ್ಲಿದ್ದಂತಹ ಸಂದರ್ಭದಲ್ಲಿ ನಮಗೆ ಜ್ಞಾಪಕಕ್ಕೆ ಬರುವಂಥದ್ದೇ ಇದು. ಎಷ್ಟೋ ಜನಕ್ಕೆ ಹೇಳುತ್ತಾ ಇರುತ್ತೇವೆ, ಹನುಮಾನ್ ಚಾಲೀಸವನ್ನು ಪಠಣ ಮಾಡಿಕೊಳ್ಳಿ, ಪಾರಾಯಣ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ ಎಂದು. ಹಾಗಾದರೆ, ಏನಿದರ ಮಹತ್ವ? ಹನುಮಾನ್ ಚಾಲೀಸಾ ಅಂದರೆ ಏನು? ಯಾವಾಗ ಹೇಳಬೇಕು? ಕೇಳೋದರಿಂದ ಅಥವಾ ಓದೋದರಿಂದ ಅಥವಾ ಪಾರಾಯಣ ಮಾಡೋದರಿಂದ ಇದರಿಂದ ಏನು ಶುಭವಾಗುತ್ತದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.