Temple Tour: ರೈತನ ಹೊಲದಿಂದ ಎದ್ದು ಬಂದ ಮಹಾಲಕ್ಷ್ಮಿ ಸನ್ನಿಧಿ
ಕಳೆದ ನೂರಕ್ಕೂ ಅಧಿಕ ವರ್ಷಗಳ ಹಿಂದೆ ರೈತ ಇದೆ ಸ್ಥಳದಲ್ಲಿದ್ದ ಮರಯೊಂದರ ಕೆಳಗೆ ಕಲ್ಲನ್ನ ಇಟ್ಟು ಪೂಜೆಯನ್ನ ಮಾಡಿದ್ದಾನಂತೆ.
ಯಾದಗಿರಿ ಜಿಲ್ಲೆಯಲ್ಲಿ ಕಳೆದ 29 ವರ್ಷಗಳ ಹಿಂದೆ ಅಂದರೆ 1992 ರಲ್ಲಿ ಭಕ್ತರು ಸೇರಿ ಲಕ್ಷ್ಮಿ ದೇವಸ್ಥಾನವನ್ನ ನಿರ್ಮಾಣ ಮಾಡಿದ್ದಾರೆ. ಆದರೆ ಈ ದೇವಾಲಯಕ್ಕೆ ನೂರಾರು ವರ್ಷಗಳ ಐತಿಹ್ಯ ಇದೆ ಅನ್ನೋದು ಸ್ಥಳೀಯ ಜನರ ನಂಬಿಕೆ. ಈ ದೇವಸ್ಥಾನ ಇರುವ ಜಾಗದಲ್ಲಿ ರೈತ ಜಮೀನು ಇತ್ತು. ಅಶರೀರವಾಣಿಯಂತೆ ರೈತನಿಗೆ ಲಕ್ಷ್ಮಿ ದೇವಿ ಕಲ್ಲಿನ ರೂಪದಲ್ಲಿ ನಾನು ಇಲ್ಲಿದ್ದೇನೆ. ಕಲ್ಲನ್ನ ಇಟ್ಟು ಪೂಜೆ ಮಾಡು. ಮುಂದೆ ಒಮದು ದಿನ ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತೆ ಅಂತ ಹೇಳಿದ್ದಾಳಂತೆ. ಕಳೆದ ನೂರಕ್ಕೂ ಅಧಿಕ ವರ್ಷಗಳ ಹಿಂದೆ ರೈತ ಇದೆ ಸ್ಥಳದಲ್ಲಿದ್ದ ಮರಯೊಂದರ ಕೆಳಗೆ ಕಲ್ಲನ್ನ ಇಟ್ಟು ಪೂಜೆಯನ್ನ ಮಾಡಿದ್ದಾನಂತೆ. ಅಂದು ಕಲ್ಲು ಇಟ್ಟು ಪೂಜೆ ಮಾಡಲು ಆರಂಭಿಸಿದ ಸ್ಥಳವೇ ಈಗ ಮಂದಿರವಾಗಿ ಬೆಳೆದು ನಿಂತಿದೆ.
Latest Videos