ಸೌದಿ ದೊರೆ ಅಬ್ದುಲ್ಲಾ ಕೊಲೆ ಮಾಡಿಸುವ ಬಗ್ಗೆ ಯುವರಾಜ ಮಹ್ಮದ್-ಬಿನ್-ಸಲ್ಮಾನ್ ಕೊಚ್ಚಿಕೊಂಡಿದ್ದರು ಅಂತ ಆರೋಪಿಸಿದರು ಮಾಜಿ ಅಧಿಕಾರಿ

ಸೌದಿ ದೊರೆ ಅಬ್ದುಲ್ಲಾ ಕೊಲೆ ಮಾಡಿಸುವ ಬಗ್ಗೆ ಯುವರಾಜ ಮಹ್ಮದ್-ಬಿನ್-ಸಲ್ಮಾನ್ ಕೊಚ್ಚಿಕೊಂಡಿದ್ದರು ಅಂತ ಆರೋಪಿಸಿದರು ಮಾಜಿ ಅಧಿಕಾರಿ

TV9 Web
| Updated By: shruti hegde

Updated on: Oct 27, 2021 | 9:56 AM

2018ರಲ್ಲಿ ಸೌದಿಯ ಖ್ಯಾತ ಪತ್ರಕರ್ತ, ಕಾದಂಬರಿಕಾರ, ಅಂಕಣಕಾರ ಜಮಾಲ್ ಕಶೋಗಿ ಅವರ ಕೊಲೆಯನ್ನು ಸಹ ಯುವರಾಜ ಎಮ್ ಬಿ ಎಸ್ ಮಾಡಿಸಿದ್ದು ಅಂತಲೂ ಅಲ್-ಜಬ್ರಿ ಆರೋಪಿಸಿದ್ದರು.

ಸೌದಿ ಅರೇಬಿಯಾ ಅರಸೊತ್ತಿಗೆಯ ಹಿಂದಿನ ಸಾಮ್ರಾಟ ಮಹಾರಾಜ ಅಬ್ದುಲ್ಲಾ ಅವರ ಹತ್ಯೆಯನ್ನು ಅಲ್ಲಿನ ಯುವರಾಜ ಮಹ್ಮದ್-ಬಿನ್-ಸಲ್ಮಾನ್ ಮಾಡಿಸಿದ್ದಾರೆಯೇ? ಸೌದಿಯ ಮಾಜಿ ಗುಪ್ತಚರ ಇಲಾಖೆಯ ಅಧಿಕಾರಿ ಸಾದ್ ಆಲ್-ಜಬ್ರಿ ಮಾತನ್ನು ನಂಬುವುದಾದರೆ ಹೌದು ಮಾಡಿಸಿದ್ದಾರೆ. ಮಹಾರಾಜನ ಕೊಲೆ ಮಾಡಿಸಿದ ಬಗ್ಗೆ ಖುದ್ದು ಯುವರಾಜನೇ ಒಮ್ಮೆ ಕೊಚ್ಚಿಕೊಂಡಿದ್ದರಂತೆ ಎಂದು ಜಬ್ರಿ, ರವಿವಾರದಂದು ಪ್ರಸಾರಗೊಂಡ ಸಿಬಿಎಸ್ ‘60 ಮಿನಿಟ್ಸ್’ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಆದರೆ, ಗಮನಿಸಬೇಕಿರುವ ಸಂಗತಿಯೇನೆಂದರೆ, ಮಹ್ಮದ್-ಬಿನ್-ಸಲ್ಮಾನ್ ಕೊಲೆ ಮಾಡಿಸಿರುವುದಕ್ಕೆ ಜಬ್ರಿ ಯಾವುದೇ ಪುರಾವೆ ಒದಗಿಸಲಿಲ್ಲ. ಈ ಹಿಂದೆಯೂ ಎಮ್ ಬಿ ಎಸ್ (ಮಹ್ಮದ್-ಬಿನ್-ಸಲ್ಮಾನ್ ಅವರನ್ನು ಹೀಗೆಯೇ ಕರೆಯಲಾಗುತ್ತದೆ) ವಿರುದ್ಧ ಜಬ್ರಿ ಹಲವಾರು ಆರೋಪಗಳನ್ನು ಮಾಡಿದ್ದರಾದರೂ ಅವುಗಳಲ್ಲಿ ಯಾವುದೂ ಸಾಬೀತಾಗಿಲ್ಲ. ಸಿಬಿಎಸ್ ನ್ಯೂಸ್ ಜೊತೆ ನಂತರ ಮಾತಾಡಿದ ಸೌದಿ ಅಧಿಕಾರಿಗಳು, ಜಬ್ರಿ ಅವರನ್ನು, ‘ಒಬ್ಬ ಅಯೋಗ್ಯ ಮಾಜಿ ಸರ್ಕಾರಿ ಆಧಿಕಾರಿ,’ ಎಂದು ಹೇಳಿದರು.

ಈಗ ಕೆನಡಾನಲ್ಲಿ ವಾಸವಾಗಿರುವ ಅಲ್-ಜಬ್ರಿ ಅವರು, 2014 ರಲ್ಲಿ ಆಗಿನ ಆಂತರಿಕ ವಿಭಾಗದ ಸಚಿವರರಾಗಿದ್ದ ಪ್ರಿನ್ಸ್ ಮಹ್ಮದ್ ಬಿನ್ ನಾಯೆಫ್ ಅವರನ್ನು ಎಮ್ ಬಿ ಎಸ್ ಭೇಟಿಯದಾಗ ದೊರೆ ಅಬ್ದುಲ್ಲಾ ಅವರನ್ನು ಕೊಲೆ ಮಾಡುವುದಾಗಿ ಕೊಚ್ಚಿಕೊಂಡಿದ್ದರಂತೆ, ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಆಗ ಯುವರಾಜ ಯಾವುದೇ ಉನ್ನತ ಸ್ಥಾನದಲ್ಲಿರದೆ ಅವರ ತಂದೆಯ ಆಸ್ಥಾನದ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಜಬ್ರಿ ಹೇಳಿದ್ದಾರೆ.

‘ನಾನು ಕಿಂಗ್ ಅಬ್ದುಲ್ಲಾ ಅವರ ಕೊಲೆ ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ರಷ್ಯದಿಂದ ಒಂದು ವಿಷಯುಕ್ತ ಉಂಗುರವನ್ನು ತರಿಸುತ್ತಿದ್ದೇನೆ. ಆ ಉಂಗುರ ಧರಿಸಿ ದೊರೆಯ ಜೊತೆ ಒಮ್ಮೆ ಕೈಕುಲುಕಿದರೆ ಸಾಕು, ಅವರ ಕತೆ ಮುಗಿದಂತೆಯೇ,’ ಎಂದು ಎಮ್ ಬಿ ಎಸ್ ಯುವರಾಜ ನಾಯೆಫ್ಗೆ ಹೇಳಿದ್ದರು,’ ಎಂದು ಅಲ್-ಜಬ್ರಿ ಹೇಳಿದ್ದಾರೆ. ಅವರ ಥ್ರೆಟ್ ಅನ್ನು ಸೌದಿಯ ಗುಪ್ತಚರ ಇಲಾಖೆ ಬಹಳ ಗಂಭೀರವಾಗಿ ಪರಿಗಣಿಸಿತ್ತು ಮತ್ತು ವಿಷಯ ಬಹಿರಂಗಗೊಳ್ಳದಂತೆ ರಾಜ ಮನೆತನ ಎಚ್ಚರವಹಿಸಿತ್ತು ಎಂದು ಜಬ್ರಿ ಕಾರ್ಯಕ್ರಮದಲ್ಲಿ ಹೇಳಿದ್ದರು.

2018ರಲ್ಲಿ ಸೌದಿಯ ಖ್ಯಾತ ಪತ್ರಕರ್ತ, ಕಾದಂಬರಿಕಾರ, ಅಂಕಣಕಾರ ಜಮಾಲ್ ಕಶೋಗಿ ಅವರ ಕೊಲೆಯನ್ನು ಸಹ ಯುವರಾಜ ಎಮ್ ಬಿ ಎಸ್ ಮಾಡಿಸಿದ್ದು ಅಂತಲೂ ಅಲ್-ಜಬ್ರಿ ಆರೋಪಿಸಿದ್ದರು.

ಇದನ್ನೂ ಓದಿ:   ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​