ಕುಮಾರಸ್ವಾಮಿ ಮತ್ತು ಡಾ ಸಿಎನ್ ಮಂಜುನಾಥ್ ವಿರುದ್ಧ ಗೋಮಾಳ ಕಬಳಿಕೆ ಆರೋಪ ಮಾಡಿದ ಎಸ್ ಆರ್ ಹಿರೇಮಠ

Updated on: Feb 06, 2025 | 8:28 PM

ರಾಜಕಾರಣದಲ್ಲಿ ಪ್ರಭಾವಿಗಳೆನಿಸಿಕೊಂಡವರಿಂದ ಎಗ್ಗಿಲ್ಲದೆ ಭೂಕಬಳಿಕೆ ನಡೆಯುತ್ತಿದೆ ಎಂದು ಎಸ್ ಅರ್ ಹಿರೇಮಠ ಹೇಳುತ್ತಾರೆ. ಡಾ ಸಿಎನ್ ಮಂಜುನಾಥ್ ಅವರು ಸಂಸದ ಅಂತ ಪತ್ರಕರ್ತರೊಬ್ಬರು ಹೇಳಿದಾಗ, ಹಿರೇಮಠ ಅಲ್ಲ, ಅವರು ಕುಮಾರಸ್ವಾಮಿಯವರ ತಂಗಿ ಗಂಡ ಅನ್ನುತ್ತಾರೆ. ಅಂದರೆ ಹಿರೇಮಠ ಅವರಿಗೆ ಮಂಜುನಾಥ್ ಒಬ್ಬ ಸಂಸದ ಅನ್ನೋದು ಗೊತ್ತಿಲ್ಲವೇ?

ಕೊಪ್ಪಳ: ಕೆಲ ತಿಂಗಳುಗಳಿಂದ ನಾಪತ್ತೆಯಾದಂತಿದ್ದ ಸಾಮಜಿಕ ಕಾರ್ಯಕರ್ತ ಎಸ್ ಅರ್ ಹಿರೇಮಠ ಧುತ್ತನೆ ಪ್ರತ್ಯಕ್ಷರಾಗಿದ್ದಾರೆ. ಅವರು ಯಾವಾಗಲೂ ಗಂಭೀರವಾದ ಪ್ರಕರಣಗಳನ್ನು ತೆಗೆದುಕೊಂಡೇ ಮಾಧ್ಯಮಗಳ ಮುಂದೆ ಬರುತ್ತಾರೆ. ಅವರ ಈಗಿನ ಆರೋಪವೇನೆಂದರೆ ರಾಮನಗರ ಜಿಲ್ಲೆ ಬಿಡದಿ ಹೋಬಳಿ ವ್ಯಾಪ್ತಿಗೆ ಬರುವ ಕೇತಗಾನಹಳ್ಳಿಯಲ್ಲಿ 71 ಎಕರೆ ಗೋಮಾಳ ಜಮೀನನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ ತಾಯಿಯ ಸಹೋದರಿ, ಸಂಸದ ಡಾ ಸಿಎನ್ ಮಂಜುನಾಥ್, ಮದ್ದೂರು ಶಾಸಕರಾಗಿದ್ದ ಡಿಸಿ ತಮ್ಮಣ್ಣ, ಅವರ ಪತ್ನಿ ಪ್ರಮೀಳಾ, ನಂಜುಂಡಯ್ಯ, ಸುನಂದಾ ಮೊದಲಾದವರು ಕಬಳಿಸಿದ್ದಾರೆ. ಸ್ಥಳೀಯರ ಬೆಂಬಲವಿದ್ದರೆ ಮಾತ್ರ ತಾನು ಪ್ರಕರಣವನ್ನು ಕೈಗೆತ್ತಿಕೊಂಡು ಹೋರಾಡುತ್ತೇನೆ ಎಂದು ಹಿರೇಮಠ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಎಸ್​ಐಟಿ ರಚನೆ