ಬ್ಯಾಂಕ್ನಿಂದ ಬೈಕ್ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಡಮರಗಿಡ್ಡ ಮಂಡಲದ ಕಣಕುರ್ತಿ ಗ್ರಾಮದ ನಿವಾಸಿಯೊಬ್ಬರು ಬ್ಯಾಂಕಿನಿಂದ 4 ಲಕ್ಷ ಹಣವನ್ನು ಪಡೆದುಕೊಂಡು, ಚೀಲದಲ್ಲಿ ಇಟ್ಟುಕೊಂಡು ತಮ್ಮ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ಹಣ ಕಳ್ಳತನವಾಗಿದೆ. ನಾರಾಯಣಪೇಟೆಯ ಚೌಕ್ ಬಜಾರ್‌ನಲ್ಲಿರುವ ಬೇಕರಿಯ ಬಳಿ ತಮ್ಮ ಬೈಕ್ ನಿಲ್ಲಿಸಿ, ಬೇಕರಿಯೊಳಗೆ ಹೋದಾಗ ಅದೇ ಅವಕಾಶಕ್ಕೆ ಕಾಯುತ್ತಿದ್ದ ಕಳ್ಳನೊಬ್ಬ ದುಡ್ಡಿನ ಬ್ಯಾಗ್ ಕದ್ದು ಪರಾರಿಯಾಗಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೈದರಾಬಾದ್: ತೆಲಂಗಾಣದಲ್ಲಿ ಬ್ಯಾಂಕ್‌ಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು 4 ಲಕ್ಷ ರೂ. ಹಣದ ಬ್ಯಾಗ್ ಬೈಕ್ನಲ್ಲೇ ಇಟ್ಟು ಬೇಕರಿಗೆ ಹೋಗಿದ್ದಾರೆ. ಬೇಕರಿಯಲ್ಲಿ ತಿಂಡಿ ಕೊಳ್ಳುವಾಗ ಅದೇ ಸಮಯಕ್ಕೆ ಕಾಯುತ್ತಿದ್ದ ಕಳ್ಳನೊಬ್ಬ ಆ ಬೈಕ್‌ನಿಂದ ಹಣ ತುಂಬಿದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾರಾಯಣಪೇಟೆಯ ಚೌಕ್ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

