ಹೇಮಗಿರಿ ಕ್ಷೇತ್ರದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ತೆಪ್ಪೋತ್ಸವ

Updated on: Feb 10, 2025 | 10:18 AM

ಜಾತ್ರೆ, ರಥೋತ್ಸವ, ಊರಹಬ್ಬ ಮೊದಲಾದ ಧಾರ್ಮಿಕ ಉತ್ಸವಗಳನ್ನು ದೇಶದೆಲ್ಲೆಡೆ ಬೇರೆ ಬೇರೆ ಹೆಸರುಗಳಲ್ಲಿ ಆಚರಿಲಾಗುತ್ತದೆ. ಜಾತ್ರೆಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿವೆ. ಅದರೆ ದುರದೃಷ್ಟಕರ ಸಂಗತಿಯೆಂದರೆ ಯುವ ಜನಾಂಗದಲ್ಲಿ ಜಾತ್ರೆಗಳ ಮೇಲೆ ಒಲವು ಮತ್ತು ಆಸಕ್ತಿ ಕಡಿಮೆಯಾಗುತ್ತಿದೆ. ಹೆಚ್ಚಿನ ಸಮಯವನ್ನು ತಮ್ಮ ಮೊಬೈಲ್ ಗಳಲ್ಲಿ ರೀಲ್ಸ್ ನೋಡುವುದರಲ್ಲಿ ಅವರು ಹರಣ ಮಾಡುತ್ತಿದ್ದಾರೆ.

ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಕ್ಷೇತ್ರದಲ್ಲಿ ಕಳೆದ ರಾತ್ರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿಯ ತೆಪ್ಪೋತ್ಸವ ಬಹಳ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಹೇಮಗಿರಿಯಲ್ಲಿ ರಥೋತ್ಸವ ಮತ್ತು ಧಾರ್ಮಿಕ ಒಂದು ವಾರಕ್ಕಿಂತ ಮೊದಲೇ ಆರಂಭಗೊಂಡಿವೆ. ಕಳೆದ ವಾರ ದನಗಳ ಜಾತ್ರೆ ಬ್ರಹ್ಮ ರಥೋತ್ಸವ ಜರುಗಿದ್ದವು ಮತ್ತು ಸಾವಿರಾರು ಭಕ್ತರು ಉತ್ಸಗಳಲ್ಲಿ ಭಾಗಿಯಾಗಿದ್ದರು. ನಿನ್ನೆ ರಾತ್ರಿ ನಡೆದ ತೆಪ್ಪೋತ್ಸವದಲ್ಲೂ ಮಂಡ್ಯ ಮಾತ್ರವಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಗಳೂರು: ರಥೋತ್ಸವದ ವೇಳೆ ವಿಟ್ಲ ಪಂಚಲಿಂಗೇಶ್ವರ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​