ಮಂಗಳೂರು: ರಥೋತ್ಸವದ ವೇಳೆ ವಿಟ್ಲ ಪಂಚಲಿಂಗೇಶ್ವರ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​

ಮಂಗಳೂರು: ರಥೋತ್ಸವದ ವೇಳೆ ವಿಟ್ಲ ಪಂಚಲಿಂಗೇಶ್ವರ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Ganapathi Sharma

Updated on: Jan 23, 2025 | 11:03 AM

ಇತ್ತೀಚೆಗೆ ಡ್ರೋನ್ ಹಾಗೂ ಡ್ರೋನ್ ಕ್ಯಾಮರಾಗಳ ಹಾವಳಿ ಜೋರಾಗಿದೆ. ಉತ್ಸವ, ಜಾತ್ರೆಗಳ ಸಂದರ್ಭಗಳಲ್ಲಿಯೂ ಡ್ರೋನ್ ಕ್ಯಾಮರಾ ಬಳಕೆ ಹೆಚ್ಚಾಗಿದೆ. ಆದರೆ, ಇದುವೇ ಎಡವಟ್ಟಿಗೂ ಕಾರಣವಾಗಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ರಥೋತ್ಸವದ ಸಂದರ್ಭ ನಿಯಂತ್ರಣ ತಪ್ಪಿದ ಡ್ರೋನ್ ಒಂದು ದೇವರ ಮೂರ್ತಿ, ಅರ್ಚಕರಿಗೆ ಬಡಿದಿದೆ. ವಿಡಿಯೋ ಈಗ ವೈರಲ್ ಆಗುತ್ತಿದೆ.

ಮಂಗಳೂರು, ಜನವರಿ 23: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಡ್ರೋನ್ ಹಾರಿಸಿ ಹುಚ್ಚಾಟ ಮೆರೆಯಲಾಗಿದೆ. ನಿಯಂತ್ರಣ ತಪ್ಪಿದ ಡ್ರೋನ್ ಉತ್ಸವ ಮೂರ್ತಿಗೆ ಬಡಿದು ಸಹಾಯಕ ಅರ್ಚಕರ ಮೇಲೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಸಹಾಯಕ ಅರ್ಚಕರು ಡ್ರೋನ್​​ ಅನ್ನು ಕಾಲಿನಿಂದ ಒದ್ದು ಕೆಳಗೆ ಹಾಕಿದ್ದಾರೆ. ಡ್ರೋನ್​ ಅಪರೇಟರ್​ ಹುಚ್ಚಾಟದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ