ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು

ರಾಜೇಶ್ ದುಗ್ಗುಮನೆ
|

Updated on: Jan 23, 2025 | 8:20 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಫಿನಾಲೆಗೆ ಬಾಕಿ ಇರೋದು ಇನ್ನು ಎರಡು ದಿನಗಳು ಮಾತ್ರ. ಈ ದಿನಕ್ಕಾಗಿ ಸ್ಪರ್ಧಿಗಳು ಹಾಗೂ ವೀಕ್ಷಕರು ಕಾದಿದ್ದಾರೆ. ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲವೂ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ನುಗ್ಗಿದ್ದಾರೆ ಇದು ಅಚ್ಚರಿ ಮೂಡಿಸಿದೆ.

‘ಬಿಗ್ ಬಾಸ್’ ಮನೆಗೆ ಸ್ಪರ್ಧಿಗಳು ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಇನ್ನು ಫಿನಾಲೆಗೆ ಉಳಿದಿರೋದು ಕೇವಲ ಎರಡು ದಿನ ಮಾತ್ರ. ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅದಕ್ಕೂ ಮೊದಲೇ ಮನೆ ಒಳಗೆ ಅಭಿಮಾನಿಗಳ ಆಗಮನ ಆಗಿದೆ. ಎಲ್ಲರೂ ಬಿಗ್ ಬಾಸ್ ಮನೆಗೆ ನುಗ್ಗಿ ತಮ್ಮಿಷ್ಟದ ಸ್ಪರ್ಧಿಗಳ ಕಾರ್ಡ್​ನ ತೋರಿಸಿದ್ದಾರೆ. ಈ ಸಂದರ್ಭದ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.