ಗೆಲುವಿನ ಖುಷಿಯಲ್ಲಿ ‘ಬಘೀರ’ ಚಿತ್ರತಂಡ; ಶ್ರೀಮುರಳಿ ಸಕ್ಸಸ್ ಮೀಟ್; ಲೈವ್ ನೋಡಿ..

|

Updated on: Nov 06, 2024 | 6:49 PM

ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಹಿಟ್ ಆಗಿದೆ. ಈ ಖುಷಿಯಲ್ಲಿ ಚಿತ್ರತಂಡದವರು ಇಂದು (ನವೆಂಬರ್​ 06) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್ ಇರುವ ಈ ಸಿನಿಮಾಗೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣ ಮಾಡಿದೆ.

‘ರೋರಿಂಗ್ ಸ್ಟಾರ್​’ ಶ್ರೀಮುರಳಿ ಅವರ ಖಾತೆಯಲ್ಲಿ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆದ ‘ಬಘೀರ’ ಸಿನಿಮಾ ಯಶಸ್ಸು ಕಂಡಿದೆ. ಅದೇ ಖುಷಿಯಲ್ಲಿ ಸಿನಿಮಾ ತಂಡದವರು ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಗರುಡ ರಾಮ್, ಪ್ರಕಾಶ್ ರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಕಿರಗಂದೂರು ಅವರು ‘ಬಘೀರ’ ಸಿನಿಮಾವನ್ನು ನಿರ್ಮಿಸಿದ್ದು, ಡಾ. ಸೂರಿ ಅವರು ನಿರ್ದೇಶಿಸಿದ್ದಾರೆ. ಸಿನಿಮಾ ಸಕ್ಸಸ್ ಮೀಟ್​ನ ಲೈವ್ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.