ಶೃಂಗೇರಿ ಅಂಚೆ ಮತ ವಿವಾದ: ಮರಳಿ ಶಾಸಕ ಸ್ಥಾನ ದೊರೆತಿರುವುದಕ್ಕೆ ಕಾಂಗ್ರೆಸ್ನ ರಾಜೇಗೌಡ ಫುಲ್ ಖುಷ್
ಶೃಂಗೇರಿ (sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 'ಯಥಾಸ್ಥಿತಿ' ಕಾಯ್ದುಕೊಳ್ಳಲು ಆದೇಶಿಸಿದೆ. ಈ ಆದೇಶದಿಂದಾಗಿ, ಟಿ.ಡಿ. ರಾಜೇಗೌಡ ಅವರು ಶಾಸಕರಾಗಿ ಮುಂದುವರಿಯಲಿದ್ದು, ಇತ್ತೀಚೆಗೆ ಗೆದ್ದಿದ್ದ ಡಿ.ಎನ್. ಜೀವರಾಜ್ ಶಾಸಕ ಸ್ಥಾನಕ್ಕೆ ಹಿನ್ನಡೆಯಾಗಿದೆ. ಇನ್ನು ಅಂಚೆ ಮತ ಮರು ಎಣಿಕೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದಕ್ಕೆ ರಾಜೇಗೌಡ ಅವರು ಫುಲ್ ಖುಷ್ ಆಗಿದ್ದಾರೆ.
ನವದೆಹಲಿ, (ಮೇ 11): ಶೃಂಗೇರಿ (sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ‘ಯಥಾಸ್ಥಿತಿ’ ಕಾಯ್ದುಕೊಳ್ಳಲು ಆದೇಶಿಸಿದೆ. ಈ ಆದೇಶದಿಂದಾಗಿ, ಟಿ.ಡಿ. ರಾಜೇಗೌಡ ಅವರು ಶಾಸಕರಾಗಿ ಮುಂದುವರಿಯಲಿದ್ದು, ಇತ್ತೀಚೆಗೆ ಗೆದ್ದಿದ್ದ ಡಿ.ಎನ್. ಜೀವರಾಜ್ ಶಾಸಕ ಸ್ಥಾನಕ್ಕೆ ಹಿನ್ನಡೆಯಾಗಿದೆ. ಇನ್ನು ಅಂಚೆ ಮತ ಮರು ಎಣಿಕೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದಕ್ಕೆ ರಾಜೇಗೌಡ ಅವರು ಫುಲ್ ಖುಷ್ ಆಗಿದ್ದಾರೆ.
ಈ ಬಗ್ಗೆ ನವದೆದೆಹಲ್ಲಿ ಮಾತನಾಡಿ ರಾಜೇಗೌಡ , ಹೈಕೋರ್ಟ್ ಆದೇಶ ಮತ್ತು ನಂತರದ ಪ್ರಕ್ರಿಯೆಗೆ ತಡೆ ನೀಡಿದ್ದು, ಸುಪ್ರೀಂಕೋರ್ಟ್ನಲ್ಲಿ ನನಗೆ ನ್ಯಾಯ ಸಿಕ್ಕಿದೆ. ಅಂಚೆ ಮತ ಎಣಿಕೆಯಲ್ಲಿ 2 ಮತ ನನ್ನ ಪರವಾಗಿ ಬಂದಿತ್ತು. ನನ್ನ ಮತಗಳು ಹೆಚ್ಚಾಗುವ ಬದಲು ಕಡಿಮೆ ತೋರಿಸಲಾಗಿತ್ತು. ಈ ಹಂತದಲ್ಲಿ ಅಕ್ರಮವಾಗಿದೆ ಎಂದು ಅನುಮಾನ ಇತ್ತು. ಹೀಗಾಗಿ ನಾನು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ನ್ಯಾಯ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
