AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗೇರಿ ಅಂಚೆ ಮತಗಳ ಟ್ಯಾಂಪರಿಂಗ್: ಚುನಾವಣಾಧಿಕಾರಿ ಗೌರವ್ ಕುಮಾರ್ ‌ಶೆಟ್ಟಿ ಹೇಳಿದ್ದೇನು?

ಶೃಂಗೇರಿ ಅಂಚೆ ಮತಗಳ ಟ್ಯಾಂಪರಿಂಗ್: ಚುನಾವಣಾಧಿಕಾರಿ ಗೌರವ್ ಕುಮಾರ್ ‌ಶೆಟ್ಟಿ ಹೇಳಿದ್ದೇನು?

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: May 03, 2026 | 11:30 AM

Share

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೈಕೋರ್ಟ್ ಆದೇಶದಂತೆ ಪೂರ್ಣಗೊಂಡಿದ್ದು, ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ಯಾಂಪರಿಂಗ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಆ ಆರೋಪಗಳು ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಬರುತ್ತಿದ್ದು, ರಿಟರ್ನಿಂಗ್ ಆಫೀಸರ್ ಆಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವ್ಯಾಪ್ತಿ ಕೇವಲ ಅಂಚೆ ಮತಪತ್ರಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು, ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೈಕೋರ್ಟ್ ಆದೇಶದಂತೆ ಪೂರ್ಣಗೊಂಡಿದ್ದು, ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ಯಾಂಪರಿಂಗ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಆ ಆರೋಪಗಳು ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಬರುತ್ತಿದ್ದು, ರಿಟರ್ನಿಂಗ್ ಆಫೀಸರ್ ಆಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವ್ಯಾಪ್ತಿ ಕೇವಲ ಅಂಚೆ ಮತಪತ್ರಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ನಿರ್ದೇಶನದಂತೆ 279 ತಿರಸ್ಕೃತ ಮತಗಳನ್ನು ಮರು ಪರಿಶೀಲನೆ ಮಾಡಲಾಗಿದೆ. ಅಲ್ಲದೆ, 1543 ಮತಗಳನ್ನು ಮರು ಎಣಿಕೆ ಮಾಡಲಾಗಿದ್ದು, ಮರು ಪರಿಶೀಲನೆಯಲ್ಲಿ ಮಾನ್ಯ ಎಂದು ಕಂಡುಬಂದ ತಿರಸ್ಕೃತ ಮತಗಳನ್ನೂ ಎಣಿಕೆಗೆ ಪರಿಗಣಿಸಲಾಗಿದೆ. ಮತಗಳನ್ನು ಮಾನ್ಯ ಮಾಡುವುದು ಅಥವಾ ಅಮಾನ್ಯ ಮಾಡುವುದು ಚುನಾವಣಾ ಆಯೋಗದ ಹ್ಯಾಂಡ್‌ಬುಕ್ ಮತ್ತು ಕಾಯ್ದೆಗಳ ಪ್ರಕಾರ ನಡೆಯುತ್ತದೆ ಎಂದು ಶೆಟ್ಟಿ ಹೇಳಿದ್ದಾರೆ. ಹಿಂದೆ ಮಾನ್ಯವಾಗಿದ್ದ ಕೆಲವು ಮತಗಳು ಈಗ ಅಮಾನ್ಯವಾಗಿರುವುದಕ್ಕೆ ಇದು ಕಾರಣ. 12 ಮತಗಳ ನಾಪತ್ತೆಯ ಕುರಿತು ಪ್ರತಿಕ್ರಿಯಿಸಲು ತಮಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us