ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಒಳ್ಳೆಯದಾಗಲಿ ಅಂತ ನನ್ನನ್ನು ಆಶೀರ್ವದಿಸಿದ್ದಾರೆ: ಸುನೀಲ್ ಬೋಸ್

|

Updated on: Mar 30, 2024 | 12:32 PM

ಪ್ರಸಾದ್ ಅವರನ್ನು ಬಾಲ್ಯದಿಂದ ನೋಡುತ್ತಿದ್ದೇನೆ, ತನ್ನ ತಂದೆಯವರಿಗಾಗಲೀ ಅಥವಾ ತನಗಾಗಲೀ ಅವರ ವಿರುದ್ಧ ವೈಯಕ್ತಿಕವಾಗಿ ಏನೂ ಇಲ್ಲ ಎಂದು ಹೇಳಿದರು. 50 ವರ್ಷಗಳ ಕಾಲ ಸುದೀರ್ಘ ರಾಜಕಾರಣ ನಡೆಸಿದ ಬಳಿಕ ನಿವೃತ್ತಿ ಘೋಷಿಸಿರುವ ಪ್ರಸಾದ್ ಬಹಳ ಸಮಯದವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದರು, ತನಗೆ ಒಳ್ಳೆಯದಾಗಲಿ ಅಂತ ಹರಸಿ ಕಳಿಸಿದ್ದಾರೆ ಎಂದು ಸುನೀಲ್ ಹೇಳಿದರು.

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ (Chamarajanagar Lok Sabha constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಚಿವ ಹೆಚ್ ಸಿ ಮಹದೇವಪ್ಪ (HC Mahadevappa) ಮಗ ಸುನೀಲ್ ಬೋಸ್ (Sunil Bose) ಇಂದು ನಗರದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡುವಾಗ ಟಿಕೆಟ್ ತಡವಾಗಿ ಸಿಕ್ಕಿದ್ದಕ್ಕೆ ಬೇಸರವೇನೂ ಇಲ್ಲ, ಆಕಾಂಕ್ಷಿಗಳು ಜಾಸ್ತಿ ಇದ್ದ ಕಾರಣ ಮುಂದೊಂದು ದಿನ ಸಿಗುತ್ತದೆ ಎಂಬ ಭರವಸೆ ಮತ್ತು ನಿರೀಕ್ಷೆಯಲ್ಲಿದ್ದೆ ಎಂದರು. ರಾಜಕಾರಣಕ್ಕೆ ತಾನು ಅಪರಿಚಿತನೇನೂ ಅಲ್ಲ ಎನ್ನುವ ಸುನೀಲ್ ಮೂರು ಲೋಕಸಭಾ, ಮೂರು ವಿಧಾನ ಪರಿಷತ್ ಮತ್ತು ನಾಲ್ಕು ವಿಧಾನಸಭಾ ಚುನಾವಣೆ ಮಾಡಿರುವ ಅನುಭವ ತನಗಿದೆ ಎಂದರು. ಚಾಮರಾಜನಗರದ ಹಾಲಿ ಸಂಸದ ಮತ್ತು ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ವಿ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದನ್ನು ಹೇಳಿದ ಸುನೀಲ್, ರಾಜಕಾರಣ ಯಾವತ್ತಿಗೂ ನಿಂತ ನೀರಲ್ಲ, ಪ್ರಸಾದ್ ಅವರನ್ನು ಬಾಲ್ಯದಿಂದ ನೋಡುತ್ತಿದ್ದೇನೆ, ತನ್ನ ತಂದೆಯವರಿಗಾಗಲೀ ಅಥವಾ ತನಗಾಗಲೀ ಅವರ ವಿರುದ್ಧ ವೈಯಕ್ತಿಕವಾಗಿ ಏನೂ ಇಲ್ಲ ಎಂದು ಹೇಳಿದರು. 50 ವರ್ಷಗಳ ಕಾಲ ಸುದೀರ್ಘ ರಾಜಕಾರಣ ನಡೆಸಿದ ಬಳಿಕ ನಿವೃತ್ತಿ ಘೋಷಿಸಿರುವ ಪ್ರಸಾದ್ ಬಹಳ ಸಮಯದವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದರು, ತನಗೆ ಒಳ್ಳೆಯದಾಗಲಿ ಅಂತ ಹರಸಿ ಕಳಿಸಿದ್ದಾರೆ ಎಂದು ಸುನೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:    ಚಾಮರಾಜನಗರ ಕ್ಷೇತ್ರದ ಟಿಕೆಟ್ ಫೈನಲ್: ಮತ್ತೋರ್ವ ಸಚಿವರ ಪುತ್ರನಿಗೆ ಕಾಂಗ್ರೆಸ್ ಮಣೆ