ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!
ಒಂದು ವೇಳೆ ತನ್ನನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಸೀಟುಗಳನ್ನು ಗೆದ್ದು ಬಿಜೆಪಿ ನಾಯಕರೊಬ್ಬರನ್ನು ಮುಖ್ಯಮಂತ್ರಿಯಾಗುವುದನ್ನು ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮುಲು ಹೇಳುತ್ತಾರೆ. ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆ ಎರಡರಲ್ಲೂ ಸೋತ ಶ್ರೀರಾಮುಲು ಕರ್ನಾಟಕವನ್ನು ಗೆದ್ದುಕೊಡುವ ಮಾತಾಡುತ್ತಾರೆ!
ಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ ಅದನ್ನು ಅವರು ಹೇಳುವ ರೀತಿ ಬೇರೆಯಾಗಿದೆ. ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಹೆಸರು ಉಲ್ಲೇಖಿಸಿರುವುದಕ್ಕೆ ಹಿಗ್ಗಿರುವ ಅವರು ಯಡಿಯೂರಪ್ಪರನ್ನು ದಕ್ಷಿಣ ಭಾರತದ ಭೀಷ್ಮ ಮತ್ತು ತನ್ನ ತಂದೆಯ ಸಮಾನ ಹಾಗೂ ವಿಜಯೇಂದ್ರರನ್ನು ತಮ್ಮ ಕಿರಿಯ ಸಹೋದರ ಎನ್ನುತ್ತ ತಾವು ಯಡಿಯೂರಪ್ಪ ಕುಟುಂಬದ ಒಂದು ಭಾಗ ಎನ್ನುತ್ತಾರೆ. ಹಿಂದೆ ಯಡಿಯೂರಪ್ಪ ತಮ್ಮ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷನ ಪಟ್ಟ ಕಟ್ಟಿಸಿದಂತೆ, ಹಿಂದುಳಿದ ವರ್ಗದವನಾದ ತನಗೆ ಒಂದು ಅವಕಾಶ ಮಾಡಿಕೊಡಲಿ ಎಂದು ಶ್ರೀರಾಮುಲು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಬಿಜೆಪಿ ಸಂಘಟನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾಜಿ ಸಚಿವ ಶ್ರೀರಾಮುಲು