ಅನಂತ್​​ ಕುಮಾರ್​​ ಹೆಗಡೆ ಮರಳಿ ರಾಜಕೀಯಕ್ಕೆ? ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಿಷ್ಟು

Edited By:

Updated on: Feb 27, 2026 | 2:07 PM

ಅನಂತ್ ಕುಮಾರ್ ಹೆಗಡೆ ಸಕ್ರಿಯ ರಾಜಕಾರಣಕ್ಕೆ ಮರಳಿದರೆ ಸ್ವಾಗತಿಸುವುದಾಗಿ ಶ್ರೀರಾಮುಲು ಹೇಳಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರನ್ನು ಹಿಂದು ಫೈರ್ ಬ್ರಾಂಡ್ ಆಗಿದ್ದು, ಸಂಸದರಾಗಿದ್ದ ಅವರಿಗೆ ಕರಾವಳಿ ಪ್ರದೇಶದಲ್ಲಿ ಒಳ್ಳೆಯ ಹೆಸರಿದೆ. ಅನಂತ್ ಕುಮಾರ್ ಹೆಗಡೆ ಎಂದರೆ ಯುವಕರು ಕುಣಿದು ಕುಪ್ಪಳಿಸುತ್ತಾರೆ. ವಾಜಪೇಯಿ ಮತ್ತು ಅಡ್ವಾಣಿ ಬಂದಿದ್ದ ಸಮಯದಲ್ಲಿ ನಾನೇ ಅದನ್ನು ನೋಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ, ಫೆಬ್ರವರಿ 27: ಮಾರ್ಚ್ 8ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಹೀಗಾಗಿ ತಮ್ಮ ಹಳೆಯ ರಣಕಣವೆಂದೇ ಗುರುತಿಸಿಕೊಂಡಿರುವ ಭಟ್ಕಳದಿಂದಲೇ ಅವರು ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್​​ ಆರಂಭಿಸಲಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿ. ಶ್ರೀರಾಮುಲು, ಅನಂತ್ ಕುಮಾರ್ ಹೆಗಡೆ ಅವರ ರಾಜಕೀಯ ಮರುಪ್ರವೇಶವನ್ನು ಸ್ವಾಗತಿಸಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಅಜ್ಞಾತವಾಸದಲ್ಲಿರುವ ಅನಂತ್ ಕುಮಾರ್ ಹೆಗಡೆ ಅವರನ್ನು ಹಿಂದು ಫೈರ್ ಬ್ರಾಂಡ್ ಎಂದು ಬಣ್ಣಿಸಿದ ಅವರು, ಕರಾವಳಿ ಪ್ರದೇಶದಲ್ಲಿ ಅವರಿಗೆ ಉತ್ತಮ ಹೆಸರಿದೆ ಮತ್ತು ಯುವಕರಲ್ಲಿ ಅಪಾರ ಜನಪ್ರಿಯತೆ ಇದೆ. ಅವರು ಮತ್ತೆ ಪಕ್ಷದಲ್ಲಿ ಸಕ್ರಿಯರಾಗುವುದನ್ನು ಎಲ್ಲರೂ ಸ್ವಾಗತಿಸುತ್ತಾರೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us