Srisailam Dam: ಹಸಿರು ಬೆಟ್ಟಗಳ ನಡುವೆ ಭೋರ್ಗರೆವ ಶ್ರೀಶೈಲಂ ಡ್ಯಾಂ ಸೊಬಗು ನೋಡಿ!

|

Updated on: Aug 02, 2024 | 8:24 PM

ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದ್ದು, ಶ್ರೀಶೈಲಂ ಅಣೆಕಟ್ಟಿನ 12 ರೇಡಿಯಲ್ ಕ್ರೆಸ್ಟ್ ಗೇಟ್‌ಗಳಲ್ಲಿ 10 ಗೇಟ್​ಗಳನ್ನು ಎತ್ತಲಾಗಿದ್ದು, ನಾಗಾರ್ಜುನ ಸಾಗರ ಅಣೆಕಟ್ಟಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಗೇಟಿನಿಂದ ಹೊರಬಿದ್ದು, ಭೋರ್ಗರೆಯುತ್ತಿರುವ ನೀರಿನ ಸೌಂದರ್ಯ ಇಮ್ಮಡಿಸಿದ್ದು, ಈ ದೃಶ್ಯವನ್ನು ಡ್ರೋನ್​ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಕೃಷ್ಣಾ ನದಿಗೆ ಒಳಹರಿವು ಹೆಚ್ಚಾದ ಕಾರಣ ಶ್ರೀಶೈಲಂ ಅಣೆಕಟ್ಟಿನ 12 ರೇಡಿಯಲ್ ಕ್ರೆಸ್ಟ್ ಗೇಟ್‌ಗಳಲ್ಲಿ 10 ಗೇಟುಗಳನ್ನು ಎತ್ತುವ ಮೂಲಕ ಕೆಳಭಾಗದ ನಾಗಾರ್ಜುನ ಸಾಗರ ಅಣೆಕಟ್ಟಿಗೆ ನೀರು ಬಿಡಲಾಯಿತು. ಡ್ರೋನ್ ವಿಡಿಯೋ ನಲ್ಲಮಲ ಬೆಟ್ಟಗಳಲ್ಲಿನ ನಡುವಿನ ಶ್ರೀಶೈಲಂ ಅಣೆಕಟ್ಟಿನ ಸೌಂದರ್ಯವನ್ನು ತೋರಿಸುತ್ತಿದೆ.

ಶ್ರೀಶೈಲಂ ಜಲಾಶಯದ ಗೇಟ್​ಗಳಿಂದ ನೀರು ಬಿಡುತ್ತಿರುವುದನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಶ್ರೀಶೈಲದ 8 ಗೇಟ್‌ಗಳನ್ನು 10 ಅಡಿ ಎತ್ತರಿಸಿ 3,09,600 ಕ್ಯೂಸೆಕ್ ನೀರು ಬಿಡಲಾಗಿದೆ. ಪ್ರಸ್ತುತ ಶ್ರೀಶೈಲ ಜಲಾಶಯಕ್ಕೆ 3,80,113 ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು, ಜುರಾಳ ಮತ್ತು ಸುಂಕೇಶಲ ಜಲಾಶಯದಿಂದ ಶ್ರೀಶೈಲ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಅತಿವೃಷ್ಟಿ ಮತ್ತು ನೀರು ಬಿಡುಗಡೆಯ ಪರಿಣಾಮವಾಗಿ 4,60,000 ಕ್ಯೂಸೆಕ್ಸ್ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಮೂಲಕ ಶ್ರೀಶೈಲಂ ಅಣೆಕಟ್ಟಿಗೆ ಹರಿಯುತ್ತದೆ. ಪ್ರವಾಹದಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ