ಮೊಬೈಲ್ ರಿಂಗ್ ಆಗಿದ್ದಕ್ಕೂ ಹಣ ಕೊಡಬೇಕು ಅಂದ್ರೆ ಹೇಗೆ? ರಕ್ಷಿತ್ ಶೆಟ್ಟಿ ಗರಂ
‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಬಳಕೆಯಾದ ಹಾಡಿನ ಬಗ್ಗೆ ತಕರಾರು ಎದುರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಸಿನಿಮಾದಲ್ಲಿ ಹಾಡುಗಳ ಬಳಕೆ ಯಾವ ರೀತಿ ಆಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಎಲ್ಲದಕ್ಕೂ ಕಾಪಿ ರೈಟ್ ಅನ್ವಯ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನಟ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡು ಅನುಮತಿ ಇಲ್ಲದೇ ಬಳಕೆ ಆಗಿದೆ ಎಂಬ ಕಾರಣದಿಂದ ಅವರ ಮೇಲೆ ಕಾಪಿರೈಟ್ ಉಲ್ಲಂಘನೆ ಆರೋಪ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 2) ರಕ್ಷಿತ್ ಶೆಟ್ಟಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಅವರು ಗರಂ ಆಗಿ ಮಾತನಾಡಿದ್ದಾರೆ. ‘ಕಾಪಿ ರೈಟ್ ಅಂದ್ರೆ ಏನು ಎಂಬುದು ನಮಗೂ ಗೊತ್ತಾಗಬೇಕು. ಹಾಗಾಗಿ ನಾವು ನ್ಯಾಯಾಲಯದಲ್ಲಿ ಫೈಟ್ ಮಾಡುತ್ತಿದ್ದೇವೆ. ಸಿನಿಮಾದಲ್ಲಿ 3 ಸೆಕೆಂಡ್ ಮೊಬೈಲ್ ರಿಂಗ್ ಆದರೂ ರಾಯಲ್ಟಿ ನೀಡಬೇಕು ಅಂದರೆ ಯಾವು ಯಾಕೆ ಹಣ ನೀಡಬೇಕು’ ಎಂದು ರಕ್ಷಿತ್ ಶೆಟ್ಟಿ ಪ್ರಶ್ನಿಸಿದ್ದಾರೆ. ಎಂಆರ್ಟಿ ಮ್ಯೂಸಿಕ್ ಹಾಕಿದ ಕೇಸ್ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಈ ರೀತಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos