Kabzaa Song: ‘ಕಬ್ಜ’ ಲಿರಿಕಲ್​ ಸಾಂಗ್​ ಬಿಡುಗಡೆಗೆ ರಾಜಮೌಳಿ ಅತಿಥಿ? ಹೈದರಾಬಾದ್​ನಲ್ಲಿ ಸದ್ದು ಮಾಡಲಿದೆ ಉಪ್ಪಿ ಚಿತ್ರ

|

Updated on: Feb 01, 2023 | 7:45 AM

R Chandru | Kabzaa Kannada Movie: ಫೆಬ್ರವರಿ 4ರಂದು ಹೈದರಾಬಾದ್​ನಲ್ಲಿ ‘ಕಬ್ಜ’ ಸಿನಿಮಾದ ಅದ್ದೂರಿ ಇವೆಂಟ್​ ನಡೆಯಲಿದೆ. ಅದಕ್ಕೆ ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಆರ್​. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾ (Kabzaa Movie) ಮಾರ್ಚ್​ 17ರಂದು ಬಿಡುಗಡೆ ಆಗಲಿದೆ. ಈಗ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಲು ಸಕಲ ತಯಾರಿ ನಡೆದಿದೆ. ಈ ಸಿನಿಮಾದ ಮೊದಲ ಲಿರಿಕಲ್​ ಸಾಂಗ್​ ಹೈದರಾಬಾದ್​ನಲ್ಲಿ ಬಿಡುಗಡೆ ಆಗಲಿದೆ. ‘ಕಬ್ಜ’ ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಪ್ರಮುಖ ನಗರಗಳಲ್ಲಿ ಒಂದೊಂದು ಸಾಂಗ್​ ಬಿಡುಗಡೆ ಮಾಡಲು ಪ್ಲ್ಯಾನ್​ ಸಿದ್ಧವಾಗಿದೆ. ತೆಲುಗು ನೆಲದಲ್ಲಿ ಉಪೇಂದ್ರ (Upendra) ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೈದರಾಬಾದ್​ನಲ್ಲಿ ಫೆ.4ರಂದು ನಡೆಯಲಿರುವ ಲಿರಿಕಲ್​ ಸಾಂಗ್​ ಬಿಡುಗಡೆ ಕಾರ್ಯಕ್ರಮಕ್ಕೆ ಎಸ್​ಎಸ್​ ರಾಜಮೌಳಿ, ‘ಮೆಗಾಸ್ಟಾರ್​’ ಚಿರಂಜೀವಿ ಸೇರಿದಂತೆ ಅನೇಕ ಘಟಾನುಘಟಿಗಳು ಹಾಜರಿ ಹಾಕುವ ನಿರೀಕ್ಷೆ ಇದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆರ್​. ಚಂದ್ರು (R Chandru) ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.