ವಂದೇ ಭಾರತ್​​ ರೈಲಿನಲ್ಲಿ ಸಸ್ಯಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ ಸಿಬ್ಬಂದಿಗೆ ಕಪಾಳಮೋಕ್ಷ

Updated on: Jul 29, 2024 | 4:30 PM

ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ ಘಟನೆಯೊಂದು ನಡೆದಿದೆ, ತಪ್ಪಾಗಿ ಮಾಂಸಾಹಾರ ತಂದುಕೊಟ್ಟಿದ್ದು, ಅದನ್ನು ಪ್ರಯಾಣಿಕ ತಿಂದಿದ್ದಾರೆ. ಇದರಿಂದ ಕೋಪಗೊಂಡ ಪ್ರಯಾಣಿಕ ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ವಂದೇ ಭಾರತ್​​​ ಎಕ್ಸ್​​ಪ್ರಸ್​ ರೈಲಿನಲ್ಲಿ ಪ್ರಯಾಣಿಕರು ಮತ್ತು ಆಹಾರ ವಿತರಕ ಸಿಬ್ಬಂದಿ ನಡುವೆ ದೊಡ್ಡ ಜಗಳ ನಡೆದಿದೆ. ಪ್ರಯಾಣಿಕರೊಬ್ಬರು ಆಹಾರ ಬಡಿಸುತ್ತಿದ್ದ ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ಘಟನೆ ಜುಲೈ 26ರಂದು ನಡೆದಿದ್ದು, ಆದರೆ ಈ ವಿಡಿಯೋ ಈಗ ವೈರಲ್​​ ಆಗಿದೆ. ಹೌರಾ ಮತ್ತು ರಾಂಚಿ ನಡುವೆ ಪ್ರಯಾಣಿಸುತ್ತಿದ್ದ ವಂದೇ ಭಾರತ್​​​ ಎಕ್ಸ್​​ಪ್ರಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಬ್ಬಂದಿ​​ ಸಸ್ಯಹಾರಿ ಪ್ರಯಾಣಿಕರೊಬ್ಬರಿಗೆ ತಪ್ಪಾಗಿ ಮಾಂಸಾಹಾರಿ ಊಟವನ್ನು ಬಡಿಸಿದ್ದು, ಸಸ್ಯಹಾರಿ ಪ್ರಯಾಣಿಕ ಗೊತ್ತಿಲ್ಲದೆ ಅದನ್ನು ತಿನ್ನಲು ಪ್ರಾರಂಭಿಸಿದ್ದಾರೆ. ನಂತರ ಅದು ಸಸ್ಯಹಾರಿ ಅಲ್ಲ ಮಾಂಸ ಎಂದು ತಿಳಿದು ಕೋಪಗೊಂಡ ಪ್ರಯಾಣಿಕ ಸಿಬ್ಬಂದಿ​​​ ಮೇಲೆ ಕೈ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಬ್ಬಂದಿ​​​ ಪ್ರಯಾಣಿಕರ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಆದರೆ ಇದರಿಂದ ವೆಟರ್​​ ಕಣ್ಣೀರು ಹಾಕಿದ್ದಾರೆ, ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More