ಮೊದಲ ದಿನದಿಂದಲೇ ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತಮ ನಾಯಕತ್ವದ ಗುಣ ಪ್ರದರ್ಶಿಸುತ್ತಿದ್ದಾರೆ
ಯಾವುದೇ ಪಕ್ಷ ಸದೃಢವಾಗಬೇಕಾದರೆ ಅದರ ನಾಯಕರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟಿಕೊಂಡಿರಬೇಕು ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದನ್ನು ವಿಜೆಯೇಂದ್ರ ಮಾಡಲಾರಂಭಿಸಿದ್ದಾರೆ. ಉತ್ತಮ ನಾಯಕತ್ವದ ಲಕ್ಷಣವಿದು.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಟೀಲೋತ್ಸವ ಅಂತ್ಯಗೊಂಡು ವಿಜಯೋತ್ಸವ ಶುರುವಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿವೈ ವಿಜಯೇಂದ್ರ (BY Vijayendra) ಸಮಯ ವ್ಯರ್ಥಮಾಡದೆ ಕೆಲಸ ಶುರುಮಾಡಿದ್ದಾರೆ. ಇಂದು ಬೆಳಗ್ಗೆ ವಿಜಯೇಂದ್ರ ಗಾಂಧಿನಗರ ಕ್ಷೇತ್ರ (Gandhinagar constituency) ಬೂತ್ ನಂಬರ್ 23 ರ ಅಧ್ಯಕ್ಷ ಶಶಿಧರ್ ಮನೆಗೆ ಭೇಟಿ ನೀಡಿ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ವಿಜಯೇಂದ್ರ ಅವರೊಂದಿಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ (PC Mohan) ಮತ್ತು ಪಕ್ಷದ ಹಲವಾರು ಕಾರ್ಯಕರ್ತರಿದ್ದರು. ವಿಜೆಯೇಂದ್ರ ರಾಜಕಾರಣದ ಮೂಲಭೂತ ಅಂಶಗಳನ್ನು ಚೆನ್ನಾಗಿ ಅರಿತುಕೊಂಡಿರುವಂತಿದೆ. ಯಾವುದೇ ಪಕ್ಷ ಸದೃಢವಾಗಬೇಕಾದರೆ ಅದರ ನಾಯಕರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟಿಕೊಂಡಿರಬೇಕು ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದನ್ನು ವಿಜೆಯೇಂದ್ರ ಮಾಡಲಾರಂಭಿಸಿದ್ದಾರೆ. ಉತ್ತಮ ನಾಯಕತ್ವದ ಲಕ್ಷಣವಿದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos