Bigg Boss Kannada: ಅತಿಯಾಗಿ ಕೂಗಾಡಿದವರಿಗೆ ಮತ್ತೆ ಕ್ಲಾಸ್ ತೆಗೆದುಕೊಳ್ತಾರಾ ಕಿಚ್ಚ ಸುದೀಪ್?
ಟಾಸ್ಕ್ ಇದ್ದಾಗ ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರಿಗೊಬ್ಬರು ಬೈಯ್ದಾಡಿಕೊಂಡಿದ್ದಾರೆ. ಕೆಲವರು ತಂತ್ರದ ಜೊತೆಗೆ ಕುತಂತ್ರವನ್ನೂ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್ ಮಾತನಾಡಲಿದ್ದಾರೆ. ಕಳೆದ ವಾರ ವಿನಯ್ ಗೌಡ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಾರಿ ಯಾರಿಗೆ ಪಾಠ ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರು 5ನೇ ವಾರದ ಪಂಚಾಯ್ತಿ ನಡೆಸಲು ಸಜ್ಜಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಈ ಬಾರಿ ಕೂಗಾಟ, ಕಿರುಚಾಟ ಜೋರಾಗಿದೆ. ಟಾಸ್ಕ್ ಇದ್ದಾಗ ಒಬ್ಬರಿಗೊಬ್ಬರು ಬೈಯ್ದಾಡಿಕೊಂಡಿದ್ದಾರೆ. ಕೆಲವರು ತಂತ್ರದ ಜೊತೆಗೆ ಕುತಂತ್ರವನ್ನೂ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್ ಮಾತನಾಡಲಿದ್ದಾರೆ. ಕಳೆದ ವಾರ ವಿನಯ್ ಗೌಡ (Vinay Gowda) ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಾರಿ ಯಾರಿಗೆ ಪಾಠ ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ. ನವೆಂಬರ್ 11ರ ವೀಕೆಂಡ್ ಸಂಚಿಕೆ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಈ ಎಪಿಸೋಡ್ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಬಿಗ್ ಬಾಸ್ (Bigg Boss Kannada) ಶೋ ಉಚಿತವಾಗಿ ವೀಕ್ಷಿಸಲು ಅವಕಾಶ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು


