Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO:  ಔಟಾದರೂ ರನೌಟ್​ ಬೇಡ ಎಂದ ಸ್ಟೀವ್ ಸ್ಮಿತ್..!

VIDEO: ಔಟಾದರೂ ರನೌಟ್​ ಬೇಡ ಎಂದ ಸ್ಟೀವ್ ಸ್ಮಿತ್..!

ಝಾಹಿರ್ ಯೂಸುಫ್
|

Updated on: Mar 01, 2025 | 1:53 PM

Afghanistan vs Australia: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 50 ಓವರ್​ಗಳಲ್ಲಿ 273 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 12.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಿದೆ. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅದರಂತೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಅಂಕದೊಂದಿಗೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್​ಗೇರಿದೆ.

ಚಾಂಪಿಯನ್ಸ್ ಟ್ರೋಫಿಯ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನ 46ನೇ ಓವರ್​ನ ಕೊನೆಯ ಎಸೆತದಲ್ಲಿ ಅಝ್ಮತ್ ಒಂದು ರನ್ ಕಲೆಹಾಕಿದರು. ಇತ್ತ ನಾನ್​ ಸ್ಟೈಕರ್ ಕಡೆಯಿಂದ ಓಡಿದ ನೂರ್ ಅಹ್ಮದ್ ಬಾಲ್ ಡೆಡ್ ಆಗುವ ಮುನ್ನವೇ ಸ್ಟ್ರೈಕರ್ ಕ್ರೀಸ್​ನಿಂದ ಹೊರಬಂದಿದ್ದಾರೆ. ಅತ್ತ ಚೆಂಡು ಸಿಗುತ್ತಿದ್ದಂತೆ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ರನೌಟ್ ಮಾಡಿ ಅಪೀಲ್ ಮಾಡಿದ್ದರು. ಹೀಗಾಗಿ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಮಾಡಿದ್ದಾರೆ.

ತಕ್ಷಣವೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಮನವಿಯನ್ನು ಹಿಂಪಡೆದು ಕ್ರೀಡಾಸ್ಪೂರ್ತಿ ಮರೆದಿದ್ದಾರೆ. ಏಕೆಂದರೆ ಅದು ಬ್ಯಾಟರ್​ನ ಅಜಾಗರೂಕತೆಯಿಂದ ನಡೆದ ಘಟನೆ. ಅದರಲ್ಲೂ ನೂರ್ ಅಹ್ಮದ್ ರನ್​ಗಳಿಸಲು ಕ್ರೀಸ್​ ಬಿಟ್ಟಿರಲಿಲ್ಲ. ಬದಲಾಗಿ ಓವರ್​ ಮುಗಿದಿದ್ದರಿಂದ ನಾನ್​ ಸ್ಟ್ರೈಕರ್​ನತ್ತ ಹೆಜ್ಜೆ ಹಾಕಿದ್ದರು. ಹೀಗಾಗಿ ಸ್ಟೀವ್ ಸ್ಮಿತ್ ರನೌಟ್ ಬೇಡ ಎಂದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 50 ಓವರ್​ಗಳಲ್ಲಿ 273 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 12.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಿದೆ. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅದರಂತೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಅಂಕದೊಂದಿಗೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್​ಗೇರಿದೆ.