ಸ್ಟಿಂಗ್ ಆಪರೇಷನ್​ ಕೇಸಿಗೆ ಮತ್ತೊಂದು ಸ್ಫೋಟಕ ತಿರುವು: ಕುತೂಹಲ ಮೂಡಿಸಿದ ಸಿಸಿಬಿ ನಡೆ

Updated on: Oct 30, 2026 | 3:35 PM

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಪ್ರಕರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದು, ಸ್ಟಿಂಗ್ ಮೂಲಕನೇ ನನ್ನ ಬ್ಲ್ಯಾಕ್​ಮೇಲ್ ಮಾಡಲಾಗ್ತಿದೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಇಂಚಿಂಚೂ ತನಿಖೆ ಮಾಡಿದ್ದು.ಈ ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನಿಡಿದೆ. ಸ್ಟಿಂಗ್ ಆಪರೇಷನ್​ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆದರೂ ಸಹ ಮತ್ತೊಮ್ಮೆ ಸಿದ್ದರಾಮಯ್ಯ ಹೇಳಿಕೆ ದಾಖಲಿಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸ್ಟಿಂಗ್ ಟೀಂನಿಂದ ಬ್ಲ್ಯಾಕ್​ ಮೇಲ್ ನಡೆದಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸೈಬರ್ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಬೆಂಗಳೂರು, (ಅಕ್ಟೋಬರ್ 30): ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಪ್ರಕರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದು, ಸ್ಟಿಂಗ್ ಮೂಲಕನೇ ನನ್ನ ಬ್ಲ್ಯಾಕ್​ಮೇಲ್ ಮಾಡಲಾಗ್ತಿದೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಇಂಚಿಂಚೂ ತನಿಖೆ ಮಾಡಿದ್ದು.ಈ ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನಿಡಿದೆ. ಸ್ಟಿಂಗ್ ಆಪರೇಷನ್​ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆದರೂ ಸಹ ಮತ್ತೊಮ್ಮೆ ಸಿದ್ದರಾಮಯ್ಯ ಹೇಳಿಕೆ ದಾಖಲಿಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸ್ಟಿಂಗ್ ಟೀಂನಿಂದ ಬ್ಲ್ಯಾಕ್​ ಮೇಲ್ ನಡೆದಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸೈಬರ್ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

2011ರಲ್ಲಿ ಮಾತನಾಡುತ್ತಾ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, 2023ರಲ್ಲಿ ವಿಡಿಯೋ ಬಯಲಾಗಿದೆ. ಹೀಗಾಗಿ 2023ರಿಂದಲೂ ಈವರೆಗೂ ಯಾಕೆ ಸುಮ್ಮನಿದ್ದರು? ಎರಡೂವರೆ ವರ್ಷದಲ್ಲಿ ಏನಾದ್ರೂ ಬ್ಲ್ಯಾಕ್​ಮೇಲ್ ಮಾಡಿದ್ರಾ? ಅಥವಾ ಹಣಕ್ಕಾಗಿ ಏನಾದ್ರೂ ಡಿಮ್ಯಾಂಡ್ ಮಾಡಲಾಗಿತ್ತಾ? ರಾಜಕೀಯವಾಗಿ ಏನಾದ್ರೂ ಬೆದರಿಕೆ ಹಾಕಲಾಗಿತ್ತಾ? ವಿಡಿಯೋ ಸಂಬಂಧ ಯಾರಾದ್ರೂ ಚರ್ಚೆ ಮಾಡಿದ್ದಾರಾ? ಈ ಎಲ್ಲಾ ಆಯಾಮದಲ್ಲೂ ತನಿಖಗೆ ಮುಂದಾಗಿದ್ದಾರೆ. ಈಗಾಗಲೇ ಅನುಮಾನ ಇರುವ ಪ್ರತಿಯೊಬ್ಬರ ವಿಚಾರಣೆ ಮಾಡಲಾಗಿದೆ. ದೂರು ಪಡೆದ ಬಳಿಕ ಸಿದ್ದರಾಮಯ್ಯನವರಿಂದ ಒಮ್ಮೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದ್ರೆ, ಆರಂಭದಲ್ಲಿ ಯಾವ ಹೆಸರನ್ನು ಹೇಳಿಲ್ಲ. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯನವರ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More