ಸ್ಟಿಂಗ್ ಆಪರೇಷನ್ ಕದನಕ್ಕೆ ಶೋಷಿತ ವರ್ಗಗಳ ಒಕ್ಕೂಟ ಎಂಟ್ರಿ: ಜಿಲ್ಲೆ ಜಿಲ್ಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ ಎಂದ ರಾಮಚಂದ್ರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಸರ್ಕಾರದಲ್ಲಿನ ಮುಖ್ಯವಾದವರೇ ಸ್ಟಿಂಗ್ ಆಪರೇಷನ್ನಲ್ಲಿ ಭಾಗಿಯಾಗಿದ್ದಾರೆ. ತನಿಖೆ ಮಾಡಬೇಕೆಂದು ಸಿದ್ದರಾಮಯ್ಯನವರು ದೂರು ಕೊಟ್ಟಿದ್ದಾರೆ. ತನಿಖೆ ಹೇಗೆ ನಡೆಯುತ್ತೆ ಅಂತಾ ಒಂದು ವಾರ ಕಾದು ನೋಡುತ್ತೇವೆ. ಸಿದ್ದರಾಮಯ್ಯನವರ ಮರ್ಯಾದೆ ತೆಗೆದವರಿಗೆ ಪಾಠ ಕಲಿಸಬೇಕು. ಸ್ಟಿಂಗ್ ಆಪರೇಷನ್ ಹಿಂದೆ ಇರುವ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಒಂದು ವೇಳೆ ತನಿಖೆ ಆಗದೆ ಇದ್ರೆ ಜಿಲ್ಲೆ ಜಿಲ್ಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರು, (ಅಕ್ಟೋಬರ್ 16): ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ.ಸ್ಟಿಂಗ್ ಆಪರೇಷನ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸ್ಟಿಂಗ್ ಆಪರೇಷನ್ ಕದನದಲ್ಲಿ ಶೋಷಿತ ವರ್ಗಗಳ ಒಕ್ಕೂಟ ಪ್ರವೇಶ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಈ ಸ್ಟಿಂಗ್ ಆಪರೇಷನ್ನಲ್ಲಿ ಸಿದ್ದರಾಮಯ್ಯನವರ ಹೆಸರು ಎಳೆದು ತಂದಿರುವುದಕ್ಕೆ ಶೋಷಿತ ವರ್ಗಗಳ ಒಕ್ಕೂಟ ಸಿಡಿದೆದಿದ್ದು, ಸ್ಟಿಂಗ್ ಆಪರೇಷನ್ ಕುರಿತು ಸರಿಯಾಗಿ ತನಿಖೆ ನಡೆಯದಿದ್ದರೇ ಜಿಲ್ಲೆ ಜಿಲ್ಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಸರ್ಕಾರದಲ್ಲಿನ ಮುಖ್ಯವಾದವರೇ ಸ್ಟಿಂಗ್ ಆಪರೇಷನ್ನಲ್ಲಿ ಭಾಗಿಯಾಗಿದ್ದಾರೆ. ತನಿಖೆ ಮಾಡಬೇಕೆಂದು ಸಿದ್ದರಾಮಯ್ಯನವರು ದೂರು ಕೊಟ್ಟಿದ್ದಾರೆ. ತನಿಖೆ ಹೇಗೆ ನಡೆಯುತ್ತೆ ಅಂತಾ ಒಂದು ವಾರ ಕಾದು ನೋಡುತ್ತೇವೆ. ಸಿದ್ದರಾಮಯ್ಯನವರ ಮರ್ಯಾದೆ ತೆಗೆದವರಿಗೆ ಪಾಠ ಕಲಿಸಬೇಕು. ಸ್ಟಿಂಗ್ ಆಪರೇಷನ್ ಹಿಂದೆ ಇರುವ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಒಂದು ವೇಳೆ ತನಿಖೆ ಆಗದೆ ಇದ್ರೆ ಜಿಲ್ಲೆ ಜಿಲ್ಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ನಿಂದಲೂ ಆಯುಕ್ತರಿಗೆ ದೂರು: ಮತ್ತಷ್ಟು ತೀವ್ರ ಸ್ವರೂಪ ಪಡೆದ ಸ್ಟಿಂಗ್ ಆಪರೇಷನ್ ಪ್ರಕರಣ
ಯಾಕೆ ಸುಮ್ಮನೇ ಕೂತಿದ್ದೀರಿ ಎಂದು ನಮ್ಮ ಮೇಲೆ ಒತ್ತಡ ಇದೆ. ಸಿದ್ದರಾಮಯ್ಯ ಪರ ನಿಲ್ಲಬೇಕು ಅನ್ನೋದು ಸಮಾಜದ ಧ್ವನಿ ಇದೆ. ಈ ಸರ್ಕಾರದಲ್ಲಿ ಮುಖ್ಯವಾಗಿರೋರೆ ಇದರ ಹಿಂದೆ ಇದ್ದಾರೆ. ಸರ್ಕಾರಕ್ಕೆ ತನಿಖೆ ಮಾಡಬೇಕು ಎನ್ನುವ ಯೋಚನೆ ಇಲ್ಲ ಅನಿಸುತ್ತೆ. ಕುಮಾರಸ್ವಾಮಿ ರೀತಿ ಯಾರು ಇದ್ದಾರೆ ಎಂದು ಹೆಸರು ಹೇಳಲ್ಲ. ಆದರೆ ನಾವು ಊಹೆ ಮಾಡಿಕೊಂಡಿದ್ದೇವೆ ಎಂದರು.