ಒಟ್ಟಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡ ಕಿಚ್ಚ ಸುದೀಪ್- ಪ್ರಿನ್ಸ್ ಮಹೇಶ್ ಬಾಬು: ಫ್ಯಾನ್ಸ್ ಫುಲ್ ಖುಷ್
Kichcha Sudeepa and Mahesh Babu: ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನ ಖ್ಯಾತ ನಟರಾದ ಕಿಚ್ಚ ಸುದೀಪ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ಫಾರ್ಮಾ ಸಂಸ್ಥೆಯೊಂದರ ದಕ್ಷಿಣ ಭಾರತದ ರಾಯಭಾರಿಗಳಾಗಿದ್ದಾರೆ. ಇದರಿಂದಾಗಿ ಅವರೀರ್ವರು ಜೊತೆಯಲ್ಲಿರುವ ಚಿತ್ರವನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಮ್ಯಾನ್ ಕೈಂಡ್ ಫಾರ್ಮಾ’ ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿರೋ ‘ಹೆಲ್ತ್ ಓಕೆ’ ಮಲ್ಟಿ ವಿಟಮಿನ್ ಹಾಗೂ ಮಿನರಲ್ಸ್ ಟ್ಯಾಬ್ಲೆಟ್ ಗೆ ಇಬ್ಬರೂ ರಾಯಭಾರಿಗಳಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ಮ್ಯಾನ್ ಕೈಂಡ್ ಪಾರ್ಮಾದ ಜಾಹಿರಾತು ಚಿತ್ರೀಕರಣದಲ್ಲಿ ಸುದೀಪ್ ಹಾಗೂ ಮಹೇಶ್ ಬಾಬು ಭಾಗಿಯಾಗಿದ್ದರು. ಇದೀಗ ಆ ಜಾಹಿರಾತಿನ ಚಿತ್ರವನ್ನು ಬಿಡಗಡೆಗೊಳಿಸಲಾಗಿದ್ದು, ಸುದೀಪ್ ಹಾಗೂ ಮಹೇಶ್ ಬಾಬು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಲ್ತ್ ಓಕೆ ಟ್ಯಾಬ್ಲೆಟ್ನ ಪ್ರಚಾರಕ್ಕೆ ಖ್ಯಾತ ನಟರಿಬ್ಬರೂ ‘ಮ್ಯಾನ್ ಕೈಂಡ್ ಫಾರ್ಮಾ’ದ ರಾಯಭಾರಿಗಳಾಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ನೋಡಿ:
Rakhi Sawant: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ
(Sudeep and Mahesh Babu appear in a Commercial took fans attention)