ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಗುಂಡು, ತುಂಡು: ಬಿಯರ್, ಹಾಟ್ ಡ್ರಿಂಕ್ಸ್ಗೆ ಮುಗಿಬಿದ್ದ ಜನ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸುಧಾಕರ್ ಗೆಲುವು ಸಾಧಿಸಿದ ಹಿನ್ನಲೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಬಿಜೆಪಿ ಅಧ್ಯಕ್ಷ ಜಗದೀಶ್ ಚೌದ್ರಿ ಬಾಡೂಟ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ 90 ಪಾಕೇಟ್ ಜೊತೆ ಬಿಯರ್ ಬಾಟಲ್ ಅನ್ನು ಹಂಚಿದ್ದಾರೆ. ಮದ್ಯದ ಬಾಟಲ್ಗಾಗಿ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ನೆಲಮಂಗಲ, ಜುಲೈ 07: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ (K. Sudhakar)
ಗೆಲುವು ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಬಾಡೂಟ ಹಾಗೂ ಎಣ್ಣೆಯನ್ನು (liquor) ಕೂಡ ಹಂಚಲಾಗಿದೆ. 90 ಪಾಕೇಟ್ ಜೊತೆ ಬಿಯರ್ ಬಾಟಲ್ನ್ನು ನೀಡಲಾಗಿದೆ. ಈ ವೇಳೆ ಮದ್ಯದ ಬಾಟಲ್ಗಾಗಿ ಜನರು ಮುಗಿಬಿದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಬಕಾರಿ ಡಿಸಿ ನಾಗೇಶ್ ಪರ್ಮಿಷನ್ ಕೊಟ್ಟಿದ್ದಾರೆ ನಾವೇನೂ ಮಾಡುವುದಕ್ಕೆ ಆಗಲ್ಲ ಎಂದು ನೆಲಮಂಗಲ ಪೊಲೀಸರು ಹೇಳಿದ್ದಾರೆ. ಮದ್ಯದ ಪಾರ್ಟಿ ಬಗ್ಗೆ ಗೊತ್ತಿದ್ದರೂ ನೂತನ ಎಸ್ಪಿ ಸಿ.ಕೆ.ಬಾಬಾ ಸುಮ್ಮನಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 07, 2024 06:01 PM
Loading...
Unable to load recommendations.
Follow Us