‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್

Updated on: May 31, 2025 | 10:50 AM

ರವಿಚಂದ್ರನ್ ಅವರು ಜೀ ಕನ್ನಡ ವೇದಿಕೆಗಳ ಮೇಲೆ ಗಮನ ಸೆಳೆಯುವ ಕೆಲಸ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ‘ಭರ್ಜರಿ ಬ್ಯಚುಲರ್ಸ್’ ವೇದಿಕೆ ಮೇಲೆ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಇದರಿಂದ ರವಿಚಂದ್ರನ್ ಅವರು ತುಂಬಾನೇ ಖುಷಿ ಆದರು. ಸುಧಾರಾಣಿ ಕೂಡ ಆ ಸಂದರ್ಭದಲ್ಲಿ ಇದ್ದರು.

ರವಿಚಂದ್ರನ್ (Ravichandran) ಅವರು ಇತ್ತೀಚೆಗೆ 64ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಎಲ್ಲರೂ ಸೇರಿ ಅವರ ಜನ್ಮದಿನವನ್ನು ಸಂಭ್ರಮಿಸಿದರು. ಈ ವೇಳೆ ಅವರ ಸಹ ಕಲಾವಿದೆಯರಾದ ಸುಧಾರಾಣಿ ಹಾಗೂ ಮಾಲಾಶ್ರೀ ಅವರು ವೇದಿಕೆ ಮೇಲೆ ಆಗಮಿಸಿದರು. ‘ಸುಧಾರಾಣಿ ಕಣ್ಣಲ್ಲೇ ನಟಿಸುತ್ತಾರೆ’ ಎಂದು ಬಾಯ್ತುಂಬ ಹೊಗಳಿದರು. ಸುಧಾರಾಣಿ ಹಾಗೂ ಮಾಲಶ್ರೀ ಜೊತೆ ಅವರು ಡ್ಯಾನ್ಸ್ ಕೂಡ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More