ಮಂಡ್ಯದಿಂದ ಸ್ಪರ್ಧಿಸಲು ಎನ್ ಡಿಎ ಟಿಕೆಟ್ ಸಿಗದಿದ್ದರೆ ನನ್ನ ಮುಂದೆ ಬೇರೆ ಆಯ್ಕೆಗಳಿವೆ: ಸುಮಲತಾ ಅಂಬರೀಶ್

|

Updated on: Feb 21, 2024 | 1:56 PM

ಮಂಡ್ಯದೊಂದಿಗೆ ತನಗೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ, ಇಲ್ಲಿನ ಜನರ ಋಣ ತನ್ನ ಮೇಲಿದೆ, ಮಂಡ್ಯದಲ್ಲಿರುವಾಗ ಅಂಬರೀಶ್ ತನ್ನ ಜೊತೆ ಇದ್ದಾರೆ, ತನ್ನೊಂದಿಗೆ ಓಡಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ, ಅಂಬರೀಶ್ ಅವರಂತೆಯೇ ತಾನು ಕೂಡ ಮಂಡ್ಯ ರಾಜಕಾರಣದಿಂದ ಅಚೆ ಹೋಗಲಾರೆ ಎಂದು ಸುಮಲತಾ ಹೇಳುತ್ತಾರೆ.

ಮಂಡ್ಯ: ಸ್ಥಳೀಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತಮ್ಮ ರಾಜ್ಯಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಅನ್ನೋದು ನಿರ್ವಿವಾದಿತ. ಯಾವ ಕಾರಣಕ್ಕೂ ಮಂಡ್ಯ (Mandya) ರಾಜಕಾರಣದಿಂದ ಅವರು ದೂರ ಸರಿಯುವುದು ಸಾಧ್ಯವಿಲ್ಲ, ಅಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಅವರಿಗೆ ಎನ್ ಡಿಎ ಅಭ್ಯರ್ಥಿಯಾಗಿ ಟಿಕೆಟ್ ಸಿಗದೆ ಹೋದಾಗ್ಯೂ ಅಲ್ಲಿಂದಲೇ ಸ್ಪರ್ಧಿಸಲು ತಮಗೆ ಬೇರೆ ಆಯ್ಕೆಗಳಿವೆ ಎಂದು ಅವರು ಹೇಳುತ್ತಾರೆ. ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು ಮಂಡ್ಯದೊಂದಿಗೆ ತಮಗಿರುವ ಭಾವನಾತ್ಮಕ ನಂಟಿನ ಬಗ್ಗೆ ಹೇಳಿಕೊಂಡರು. ಮಂಡ್ಯದೊಂದಿಗೆ ತನಗೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ, ಇಲ್ಲಿನ ಜನರ ಋಣ ತನ್ನ ಮೇಲಿದೆ, ಮಂಡ್ಯದಲ್ಲಿರುವಾಗ ಅಂಬರೀಶ್ ತನ್ನ ಜೊತೆ ಇದ್ದಾರೆ, ತನ್ನೊಂದಿಗೆ ಓಡಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ, ಅಂಬರೀಶ್ ಅವರಂತೆಯೇ ತಾನು ಕೂಡ ಮಂಡ್ಯ ರಾಜಕಾರಣದಿಂದ ಅಚೆ ಹೋಗಲಾರೆ ಎಂದು ಸುಮಲತಾ ಹೇಳುತ್ತಾರೆ. ಮೊನ್ನೆ ಅವರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಈ ಹಿಂದೆಯೂ ಅವರನ್ನು ಭೇಟಿಯಾಗಿದ್ದಾಗಿ ಸುಮಲತಾ ಅಂಬರೀಶ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ