ಸಿಹಿ ಸುದ್ದಿ ಕೊಡಲಿದ್ದಾರಾ ಮಗ-ಸೊಸೆ: ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ
ಕಳೆದ ವರ್ಷ ವಿವಾಹವಾದ ಅಭಿಷೇಕ್ ಹಾಗೂ ಅವಿವಾ ಪೋಷಕರಾಗುತ್ತಿದ್ದಾರೆಯೇ? ಹೀಗೊಂದು ಪ್ರಶ್ನೆಗೆ ಸುಮಲತಾ ಅಂಬರೀಶ್ ಉತ್ತರ ನೀಡಿದ್ದಾರೆ. ಅಂಬರೀಶ್ ಜನ್ಮದಿನದಂದು ಅವರ ಸಮಾಧಿಗೆ ಪೂಜೆ ಮಾಡಿ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
ಇಂದು (ಮೇ 29) ರೆಬಲ್ ಸ್ಟಾರ್ ಅಂಬರೀಶ್ (Ambareesh) ಜನ್ಮದಿನ. ಅಂಬರೀಶ್ ಅಭಿಮಾನಿಗಳು, ಕುಟುಂಬಸ್ಥರು ಸಮಾಧಿಗೆ ಆಗಮಿಸಿ ಪೂಜೆ ಮಾಡಿದ್ದಾರೆ. ಅಂಬರೀಶ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಸಹ ಇಂದು ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿ ಪೂಜೆ ಮಾಡಿದರು. ಆ ಬಳಿಕ ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಮಾತನಾಡಿದರು. ಈ ಸಮಯದಲ್ಲಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅಪ್ಪ ಆಗುತ್ತಿದ್ದಾರೆಯೇ? ನೀವು ಅಜ್ಜಿ ಆಗುತ್ತಿದ್ದೀರಿಯೇ? ಎಂಬ ಪ್ರಶ್ನೆ ತೂರಿಬಂತು. ಪ್ರಶ್ನೆಗೆ ಜಾಣತನದ ಉತ್ತರವನ್ನು ಸುಮಲತಾ ನೀಡಿದರು. ಅಭಿಷೇಕ್ ಹಾಗೂ ಅವಿವಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇವರ ವಿವಾಹ ಬೆಂಗಳೂರು ಹಾಗೂ ಆರತಕ್ಷತೆ ಮಂಡ್ಯದಲ್ಲಿ ಬಹು ಅದ್ಧೂರಿಯಾಗಿ ನೆರವೇರಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ

