ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?

Updated on: Aug 14, 2024 | 4:51 PM

ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದ ಕಟ್ಟಡದಲ್ಲಿ ಅದ್ದೂರಿಯಾಗಿ ಪೂಜೆ, ಹೋಮ ಮಾಡಲಾಗಿದೆ. ಇದರಲ್ಲಿ ಬಹುತೇಕ ಕಲಾವಿದರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಮುಖ ಕಲಾವಿದರೇ ಗೈರಾಗಿದ್ದಾರೆ. ಈ ಕುರಿತು ನಟಿ ಸುಮಲತಾ ಅಂಬರೀಷ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ತಿಳಿಯಲು ಈ ವಿಡಿಯೋ ನೋಡಿ..

ಕನ್ನಡ ಚಿತ್ರರಂಗಕ್ಕೆ ಈಗ ಕಷ್ಟ ಕಾಲ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಾಗಿ ಪೂಜೆ, ಹೋಮ ಮಾಡಿಸಲಾಗಿದೆ. ಇಂದು (ಆಗಸ್ಟ್​ 14) ಕಲಾವಿದರ ಸಂಘದಲ್ಲಿ ಹೋಮ ನಡೆದಿದೆ. ಇದರಲ್ಲಿ ಸುಮಲತಾ ಅಂಬರೀಷ್​ ಭಾಗಿಯಾಗಿದ್ದಾರೆ. ಸ್ಯಾಂಡಲ್​ವುಡ್​ನ ಒಳಿತಿಗಾಗಿ ಈ ಪೂಜೆ ಮಾಡಲಾಗಿದ್ದರೂ ಕೂಡ ಪ್ರಮುಖ ಸ್ಟಾರ್​ ಕಲಾವಿದರು ಬಾರದೇ ಇರುವುದರ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ‘ಇದು ಸ್ವಲ್ಪ ಬೇಜಾರಿನ ವಿಷಯ. ಅಂಬರೀಷ್​ ಅವರ 20 ವರ್ಷದ ಶ್ರಮದಿಂದ ಈ ಕಲಾವಿದರ ಭವನ ಆಗಿದೆ. ಅವರು ಅಷ್ಟು ಕಷ್ಟಪಟ್ಟಿದ್ದರು. ಇದು ರಾಜ್​ಕುಮಾರ್​ ಅವರ ಕನಸಾಗಿತ್ತು. ಕಲಾವಿದರೆಲ್ಲ ಇದನ್ನು ಬಳಸಿಕೊಳ್ಳಬೇಕು ಅಂತ ಅವರು ಹೇಳಿದ್ದರು. ಉಳಿದಿದ್ದು ಕಲಾವಿದರಿಗೆ ಬಿಟ್ಟಿದ್ದು’ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 14, 2024 04:35 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More