ತುಮಕೂರಿನಲ್ಲಿ ಏಕಾಏಕಿ ಗೋಲ್ಡ್ ಮ್ಯಾನ್ ಪ್ರತ್ಯಕ್ಷ: ಅಬ್ಬಬ್ಬಾ ಮೈತುಂಬ ಬಂಗಾರ!

Updated By: ರಮೇಶ್ ಬಿ. ಜವಳಗೇರಾ

Updated on: Sep 02, 2025 | 4:37 PM

ಸನ್ನಿ ನಾನಾಸಾಹೇಬ್ ಎಂಬ ಹೆಸರಿಗಿಂತ ದೇಶದಲ್ಲಿ 'ಗೋಲ್ಡ್​​ ಮ್ಯಾನ್​' ಎಂದೇ ಖ್ಯಾತಿ ಪಡೆದ ಇವರು ಇಂದು ತುಮಕೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು..ಪುಣೆ ಮೂಲದ ಸನ್ನಿ ನಾನಾಸಾಹೇಬ್ ಎನ್ನುವ "ಚಿನ್ನದ ಮನುಷ್ಯ" ಮೈಮೇಲೆ ಬರೋಬ್ಬರಿ ಎಂಟುವರೆ ಕೆಜಿ ಚಿನ್ನ ಧರಿಸಿಕೊಂಡು ಗಣೇಶನ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಿದ್ದಾರೆ.

ತುಮಕೂರು, (ಸೆಪ್ಟೆಂಬರ್ 02): ಸನ್ನಿ ನಾನಾಸಾಹೇಬ್ ಎಂಬ ಹೆಸರಿಗಿಂತ ದೇಶದಲ್ಲಿ ‘ಗೋಲ್ಡ್​​ ಮ್ಯಾನ್​’ ಎಂದೇ ಖ್ಯಾತಿ ಪಡೆದ ಇವರು ಇಂದು ತುಮಕೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು..ಪುಣೆ ಮೂಲದ ಸನ್ನಿ ನಾನಾಸಾಹೇಬ್ ಎನ್ನುವ “ಚಿನ್ನದ ಮನುಷ್ಯ” ಮೈಮೇಲೆ ಬರೋಬ್ಬರಿ ಎಂಟುವರೆ ಕೆಜಿ ಚಿನ್ನ ಧರಿಸಿಕೊಂಡು ಗಣೇಶನ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಿದ್ದಾರೆ. ಹಿಂದಿಯ ಬಿಗ್ ಬಾಸ್ ಸೀಸನ್ 16ರ ಸ್ಪರ್ಧಿ ಹಾಗೂ ಸಿನಿಮಾ ನಿರ್ಮಾಪಕನಾದ ಗೋಲ್ಡ್​ ಮ್ಯಾನ್ ಅಲಿಯಾಸ್ ಸನ್ನಿ, ಕೈನಲ್ಲಿ ಚಿನ್ನ, ಕೊರಳಿನಲ್ಲಿ ರಾಶಿ ರಾಶಿ ಚಿನ್ನದ ಸರ ಹಾಕಿಕೊಂಡ ತುಮಕೂರು ನಗರದ ಉದ್ಯಮಿ ವಿಶ್ವಾಸ್ ಗಣೇಶ ಕಾರ್ಯಕ್ರಮದಲ್ಲಿ ಭಾಗಿಯಾದರು. ಗೋಲ್ಡ್ ಮ್ಯಾನ್​​ ನನ್ನು ನೋಡುತ್ತಿದ್ದಂತೆಯೇ ಜನರು ಒಂದು ಕ್ಷಣ ದಂಗಾಗಿದ್ದು, ವಿಡಿಯೋ ಫೋಟೋ ತೆಗೆದುಕೊಂಡರು.