ಮೂರು ಹೊಸ ಕಲರ್ ಸ್ಕೀಮ್‌ಗಳಲ್ಲಿ ರಸ್ತೆಗಿಳಿದಿದೆ ಸುಜುಕಿ ಆಕ್ಸಿಸ್ 125 ಸಿಸಿ, ಒಟ್ಟು 16 ಶೇಡ್ಗಳಲ್ಲಿ ಸ್ಕೂಟರ್ ಲಭ್ಯ!
ಹೆಚ್ಚುವರಿಯಾಗಿ, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ನ ಸ್ಟ್ಯಾಂಡರ್ಡ್ ಆವೃತ್ತಿ ಮತ್ತು ರೈಡ್ ಕನೆಕ್ಟ್ ಆವೃತ್ತಿಯು ಈಗ ಹೊಸ 'ಗ್ಲಾಸಿ ಗ್ರೇ' ಬಣ್ಣದ ಶೇಡ್ನಲ್ಲಿ ಲಭ್ಯವಿದೆ.
ಸುಜುಕಿ ತನ್ನ 125 ಸಿಸಿ ಸ್ಕೂಟರ್ ರೇಂಜ್ನಲ್ಲಿ ಹೊಸ ಕಲರ್ ಸ್ಕೀಮ್ಗಳನ್ನು ಪರಿಚಯಿಸಿದ್ದು ಇದರಲ್ಲಿ ಆಕ್ಸೆಸ್ 125 ಮತ್ತು ಬರ್ಗ್ಮನ್ ಸ್ಟ್ರೀಟ್ ಸಹ ಸೇರಿವೆ. ಕಂಪನಿಯು ಸುಜುಕಿ ಆಕ್ಸೆಸ್ 125 ಸ್ಟ್ಯಾಂಡರ್ಡ್ ಎಡಿಶನ್ ಸ್ಕೂಟರನ್ನು ಹೊಸ ಮೆಟಾಲಿಕ್ ಗ್ರೀನಿಸ್ ಬ್ಲ್ಯೂ, ಮೆಟಾಲಿಕ್ ಮಟ್ಟೆ ಬ್ಲ್ಯೂ ಮತ್ತು ಮೆಟಾಲಿಕ್ ಮಟ್ಟೆ ಬ್ಲ್ಯಾಕ್ ಬಣ್ಣಗಳಲ್ಲಿ ಲಾಂಚ್ ಮಾಡಿದೆ. ಹಾಗೆಯೇ, ಅಕ್ಸೆಸ್ ರೈಡ್ ಕನೆಕ್ಟ್ ಎಡಿಶನ್ ಗ್ಲಾಸೀ ಗ್ರೀನ್ ಬಣ್ಣದಲ್ಲಿ ರಸ್ತೆಗಿಳಿದಿದೆ. ಹೊಸ ಮೂರು ಕಲರ್ ಗಳಲ್ಲಿ ಸುಜಿಕಿ ಆಕ್ಸೆಸ್ 125 ಅನ್ನು ಪರಿಚಯಿಸುವುದರೊಂದಿಗೆ ಅದು ಈಗ ಒಟ್ಟು 16 ಶೇಡ್ ಗಳಲ್ಲಿ ಲಭ್ಯವಿದೆ.
ಸುಜುಕಿ ಆಕ್ಸೆಸ್ 125 ಅನ್ನು ಮೂರು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ: ಸ್ಟ್ಯಾಂಡರ್ಡ್ ಆವೃತ್ತಿ, ವಿಶೇಷ ಆವೃತ್ತಿ ಮತ್ತು ರೈಡ್ ಕನೆಕ್ಟ್ ಆವೃತ್ತಿ. ಸ್ಕೂಟರ್‌ನ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ ರೂ. 74,400 ರಿಂದ ಮತ್ತು ಅದು ಏಳು ಬಣ್ಣಗಳಲ್ಲಿ ಲಭ್ಯವಿದೆ: ಗಾಢ ಹಸಿರು ನೀಲಿ, ಡೀಪ್ ಬ್ಲೂ, ಮಿರಾಜ್ ವೈಟ್, ಸ್ಪಾರ್ಕಲ್ ಬ್ಲಾಕ್, ಪ್ಲಾಟಿನಂ ಸಿಲ್ವರ್, ಫೈಬ್ರೊಯಿನ್ ಗ್ರೇ ಮತ್ತು ಬೋರ್ಡೆಕ್ಸ್ ರೆಡ್.
ಇದರ ವಿಶೇಷ ಆವೃತ್ತಿಯ ಮಾದರಿಯು ರೂ 76,800 ರಿಂದ ಬೆಲೆಯನ್ನು ಹೊಂದಿದೆ ಮತ್ತು ನಾಲ್ಕು ಬಣ್ಣಗಳಲ್ಲಿ ನೀಡಲಾಗುತ್ತದೆ-ಗಾಢ ಹಸಿರು ನೀಲಿ, ಮ್ಯಾಟ್ ಕಪ್ಪು, ಮ್ಯಾಟ್ ಬೋರ್ಡೆಕ್ಸ್ ರೆಡ್ ಮತ್ತು ಮಿರಾಜ್ ವೈಟ್.
ಅಂತಿಮವಾಗಿ, ನಾವು ಸ್ಕೂಟರ್‌ನ ರೈಡ್ ಕನೆಕ್ಟ್ ಆವೃತ್ತಿಯ ಬಗ್ಗೆ ಮಾತಾಡಬೇಕಿದೆ. ಅದರ ಎಕ್ಸ್ ಶೋರೂಮ್ ಬೆಲೆ ರೂ. 81,600 ಅಗಿದ್ದು ಐದು ಪೇಂಟ್ ಸ್ಕೀಮ್‌ಗಳಲ್ಲಿ ನಿಮಗೆ ದೊರೆಯಲಿದೆ-ರಾಯಲ್ ಬ್ರೋಂಜ್, ಮಿರಾಜ್ ವೈಟ್, ಗ್ಲಾಸಿ ಗ್ರೇ, ಮ್ಯಾಟ್ ಬ್ಲ್ಯಾಕ್ ಮತ್ತು ಮ್ಯಾಟ್ ಬ್ಲೂ.
ಹೆಚ್ಚುವರಿಯಾಗಿ, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ನ ಸ್ಟ್ಯಾಂಡರ್ಡ್ ಆವೃತ್ತಿ ಮತ್ತು ರೈಡ್ ಕನೆಕ್ಟ್ ಆವೃತ್ತಿಯು ಈಗ ಹೊಸ ‘ಗ್ಲಾಸಿ ಗ್ರೇ’ ಬಣ್ಣದ ಶೇಡ್ನಲ್ಲಿ ಲಭ್ಯವಿದೆ. ಬರ್ಗ್‌ಮ್ಯಾನ್ ಸ್ಟ್ರೀಟ್ 125 ಪ್ರಸ್ತುತ ಬೆಲೆ ರೂ. 86,100 ರಿಂದ ರೂ. 89,600 ರ ನಡುವೆ ಇದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ 29ರ ಸಂಖ್ಯೆಯ ಮಗ್ಗಿ ಹೇಳುವಂತೆ ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ; ವಿಡಿಯೋ ನೋಡಿ