ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ, ಖಂಡಿತ ಪರಿಶೀಲಿಸುವೆ: ಕೆಎನ್ ರಾಜಣ್ಣ

|

Updated on: Jun 28, 2024 | 12:46 PM

ಸಾರ್ವಜನಿಕವಾಗಿ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಮಾತಾಡಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದರೂ ರಾಜಣ್ಣ ಮಾತಾಡುವುದನ್ನು ಬಿಡುತ್ತಿಲ್ಲ. ಮುಖ್ಯಮಂತ್ರಿಯವರು ಗದರಿ ಹೇಳಿದ್ದಾರೋ ಅಥವಾ ಭುಜತಟ್ಟಿ ಹೇಳಿದ್ದಾರೋ ಅನ್ನೋದು ಗೊತ್ತಾಗುತ್ತಿಲ್ಲ, ರಾಜಣ್ಣ ಆಡುವ ಮಾತು ಅಂಥ ಗೊಂದಲ ಮೂಡಿಸುತ್ತದೆ.

ತುಮಕೂರು: ಕಾವಿ ಕೇಳ್ತೀನಿ, ಚಂದ್ರಶೇಖರ್ ಶ್ರೀಗಳು ಕೊಡ್ತಾರಾ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಕ್ಕೆ ಸ್ವಾಮೀಜಿಯವರು ಅವರು ಕಾವಿ ಧರಿಸುವುದಾದರೆ ಬರಲಿ, ಅವರಿಗೆ 10 ಎಕರೆ ಜಮೀನಲ್ಲಿ ಒಂದು ಆಶ್ರಮ ಮಾಡಿಕೊಡುತ್ತೇವೆ ಎಂದು ಹೇಳಿರುವುದನ್ನು ಇಂದು ತಮಕೂರುನಲ್ಲಿ ಮಾಧ್ಯಮ ಪ್ರತಿನಿಧಿಗಳು ರಾಜಣ್ಣಗೆ ಹೇಳಿದಾಗ, ಅವರು ಏನೂ ಗೊತ್ತಿಲ್ಲದವರ ಹಾಗೆ ಯಾವ ಸ್ವಾಮಿ, ದೇಶದಲ್ಲಿ ಸಾವಿರಾರು ಸ್ವಾಮಿಗಳಿದ್ದಾರೆ ಅನ್ನುತ್ತಾರೆ. ಚಂದ್ರಶೇಖರ್ ಶ್ರೀಗಳು ಎಂದು ಪತ್ರಕರ್ತರು ಹೇಳಿದಾಗ, ಅವರು ನೀಡಿರುವ ಸಲಹೆ ಚೆನ್ನಾಗಿದೆ. ಬೆವದು ಸುರಿಸದೆ ಜೀವನ ಮಾಡುವ ಮಾರ್ಗದರ್ಶನ ಅವರು ನೀಡಿದ್ದಾರೆ, ಅವರ ಸಲಹೆಯನ್ನು ಪರಿಶೀಲಿಸುತ್ತೇನೆ ಎಂದು ರಾಜಣ್ಣ ಹೇಳಿದರು. ಹೆಚ್ಚುವರಿ ಡಿಸಿಎಂಗಳ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜಣ್ಣ, ಕೇಳೋದ್ರಲ್ಲಿ ತಪ್ಪೇನಿದೆ, ನಾವು ಕೇಳಿದಾಗ ತಾನೇ ಅದು ಹೈಕಮಾಂಡ್ ಗೆ ಗೊತ್ತಾಗೋದು, ನಾವೇನೇ ಕೇಳಿದರೂ ಅಂತಿಮ ನಿರ್ಣಯ ಹೈಕಮಾಂಡ್ ತೆಗೆದುಕೊಳ್ಳುತ್ತದೆ, ಮತ್ತು ಆ ನಿರ್ಣಯ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ರಾಜಣ್ಣ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:      ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!

Follow us on