ಅಪಘಾತಕ್ಕೀಡಾದ ಟಿಟಿಯನ್ನು ಆದರ್ಶ್ ಕೇವಲ 15ದಿನಗಳ ಹಿಂದೆ ಖರೀದಿಸಿದ್ದ: ಸುಮಂತ್, ಅದರ್ಶ್ ಸೋದರ

ಇಂದು ಬೆಳಗಿನ ಜಾವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಬಳಿ ನಡೆದ ರಸ್ತೆ ಅಫಘಾತ ಪದಗಳಲ್ಲಿ ಹೇಳಲಾಗದಷ್ಟು ಭೀಕರ. ಸ್ಥಳದಲ್ಲೇ 13 ಜನ ಸತ್ತಿದ್ದಾರೆ ಅಂದರೆ ಅಪಘಾತದ ಪ್ರಮಾಣವನ್ನು ಅರ್ಥಮಾಡಿಕೊಳ್ಳಬಹುದು. ಬದುಕುಳಿದವರ ನಾಲ್ವರ ಸ್ಥಿತಿಯೂ ಬಹಳ ಚಿಂತಾಜನಕವಾಗಿದೆಯಂತೆ.

ಅಪಘಾತಕ್ಕೀಡಾದ ಟಿಟಿಯನ್ನು ಆದರ್ಶ್ ಕೇವಲ 15ದಿನಗಳ ಹಿಂದೆ ಖರೀದಿಸಿದ್ದ: ಸುಮಂತ್, ಅದರ್ಶ್ ಸೋದರ
|

Updated on: Jun 28, 2024 | 11:01 AM

ಹಾವೇರಿ: ಇಂದು ಬೆಳಗ್ಗೆ ಜಿಲ್ಲೆಯ ಗುಂಡೇನಹಳ್ಳಿ ಬಳಿ ಭೀಕರ ಅಪಘಾತಕ್ಕೆ ತುತ್ತಾದ ಟೆಂಪೋ ಟ್ರ್ಯಾಕ್ಸ್ ವಾಹನವನ್ನು ಕೇವಲ 15-20 ದಿನಗಳ ಹಿಂದಷ್ಟೇ ಖರೀದಿಸಲಾಗಿತ್ತು ಎಂದು ಟೆಂಪೋ ಓಡಿಸುತ್ತಿದ್ದ ಚಾಲಕ ಆದರ್ಶ್ ನ ದೊಡ್ಡಪ್ಪನ ಮಕ್ಕಳು ಹೇಳುತ್ತಾರೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಇವತ್ತಿನ ಬೆಳಗಿನ ಜಾವ ಸುಮಾರು 4 ಗಂಟೆಗೆ ಟೆಂಪೋ ಗುಂಡೇನಹಳ್ಳಿ ಬಳಿ ನಿಂತಿದ್ದ ಲಾರಿಯೊಂದಕ್ಕೆ ಢಿಕ್ಕಿ ಹೊಡೆದಾಗ ಚಾಲಕ ಆದರ್ಶ್ (23) ಮತ್ತು 7 ಮಹಿಳೆಯರು ಸೇರಿದಂತೆ ಒಟ್ಟು 13 ಜನ ಸ್ಥಳದಲ್ಲೇ ಮೃತಪಟ್ಟರು. ಹೊಸದಾಗಿ ಖರೀದಿಸಿದ್ದ ಟೆಂಪೋನಲ್ಲಿ ಆದರ್ಶ್ ತನ್ನ ತಂದೆ ತಾಯಿ (ನಾಗೇಶ್ ಮತ್ತು ವಿಶಾಲಾಕ್ಷಿ) ಮತ್ತು ಇತರ ಸಂಬಂಧಿಕರೊಂದಿಗೆ ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಕೊನೆಗೆ ಸವದತ್ತಿ ಎಲ್ಲಮ್ಮನ ದರ್ಶನ ಮಾಡಿಕೊಂಡು ತಮ್ಮೂರು ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ವಾಪಸ್ಸಾಗುವಾಗ ಭೀಕರ ದುರಂತ ಸಂಭವಿಸಿದೆ. ಆದರ್ಶ್ ಕಳೆದ 6-7 ವರ್ಷಗಳಿಂದ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದ ಎಂದು ಅವಬ ದೊಡ್ಡಪ್ಪನ ಮಗ ಸುಮಂತ್ ಹೇಳುತ್ತಾನೆ. ಹೊಸ ಗಾಡಿ ಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ನಾಗೇಶ್ ನ ಜೀವನ ಹೀಗೆ ದುರಂತದಲ್ಲಿ ಕೊನೆಗೊಂಡಿದ್ದ್ದು ಅತ್ಯಂತ ದುರದೃಷ್ಟಕರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Ooti gold mine tragedy: ಊಟಿ ಚಿನ್ನದ ಗಣಿಯಲ್ಲಿ ಕಲ್ಲು ಕುಸಿದು ಕಾರ್ಮಿಕ ಸಾವು- ಟೆಂಪೋ ಗುದ್ದಿಸಿ ಮಗನಿಂದಲೇ ತಾಯಿ ಹತ್ಯೆ

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​