AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ooti gold mine tragedy: ಊಟಿ ಚಿನ್ನದ ಗಣಿಯಲ್ಲಿ ಕಲ್ಲು ಕುಸಿದು ಕಾರ್ಮಿಕ ಸಾವು- ಟೆಂಪೋ ಗುದ್ದಿಸಿ ಮಗನಿಂದಲೇ ತಾಯಿ ಹತ್ಯೆ

ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿಯಲ್ಲಿ ಮೇಲ್ಭಾಗದಿಂದ ಕಲ್ಲು ಕುಸಿದು ಕಾರ್ಮಿಕ ಯಲ್ಲಪ್ಪ ಮೃತಪಟ್ಟಿದ್ದಾನೆ. ಮತ್ತೋರ್ವ ಕಾರ್ಮಿಕ ಹನುಮಂತಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂಬ ಆರೋಪ ಕೇಳಿಬಂದಿದೆ.

Ooti gold mine tragedy: ಊಟಿ ಚಿನ್ನದ ಗಣಿಯಲ್ಲಿ ಕಲ್ಲು ಕುಸಿದು ಕಾರ್ಮಿಕ ಸಾವು- ಟೆಂಪೋ ಗುದ್ದಿಸಿ ಮಗನಿಂದಲೇ ತಾಯಿ ಹತ್ಯೆ
Ooti gold mine tragedy: ಊಟಿ ಚಿನ್ನದ ಗಣಿಯಲ್ಲಿ ಕಲ್ಲು ಕುಸಿದು ಕಾರ್ಮಿಕ ಸಾವು
TV9 Web
| Updated By: ಸಾಧು ಶ್ರೀನಾಥ್​|

Updated on:Feb 18, 2022 | 9:24 AM

Share

ರಾಯಚೂರು: ರಾಯಚೂರು ಜಿಲ್ಲೆ (raichur) ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿಯಲ್ಲಿ (Ooti gold mine) ಕಲ್ಲು ಕುಸಿದು ಕಾರ್ಮಿಕ ಯಲ್ಲಪ್ಪ(38) ಸಾವನ್ನಪ್ಪಿದ್ದಾನೆ. ಹಟ್ಟಿ ಚಿನ್ನದ ಗಣಿ ಕಂಪನಿಗೆ ಸೇರಿದ ಊಟಿ ಚಿನ್ನದ ಗಣಿಯಲ್ಲಿ ಸುಮಾರು 800 ಅಡಿ ಆಳದಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೇಲ್ಭಾಗದಿಂದ ಕಲ್ಲು ಕುಸಿದು ಕಾರ್ಮಿಕ (labourer) ಯಲ್ಲಪ್ಪ ಮೃತಪಟ್ಟಿದ್ದಾನೆ. ಮತ್ತೋರ್ವ ಕಾರ್ಮಿಕ ಹನುಮಂತಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂಬ ಆರೋಪ ಕೇಳಿಬಂದಿದೆ. ಇವರೆಲ್ಲ ಟೆಕ್ನೋಮೈನ್ಸ್ ಸಂಸ್ಥೆ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮೀಯ ರೀತಿಯಲ್ಲಿ ಟೆಂಪೋ ಗುದ್ದಿಸಿ, ಮಗನಿಂದಲೇ ತಾಯಿ ಹತ್ಯೆ ಆರೋಪ ಮೈಸೂರು: ಸಿನಿಮೀಯ ರೀತಿಯಲ್ಲಿ ಟೆಂಪೋ ಟ್ರ್ಯಾಕ್ಸ್‌ನಿಂದ ಗುದ್ದಿಸಿ ಮಗನಿಂದಲೇ ತಾಯಿಯ ಹತ್ಯೆ ನಡೆದಿರುವ ಆರೋಪ ಕೇಳಿಬಂದಿದೆ. ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಮ್ಮ (65) ಮೃತ ದುರ್ದೈವಿ. ನಾಗಮ್ಮ ಪುತ್ರ ಹೇಮರಾಜ್ (45) ಕೊಲೆ ಆರೋಪಿ.

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗಮ್ಮಗೆ ಟೆಂಪೋ ಟ್ರ್ಯಾಕ್ಸ್ ನಿಂದ ಡಿಕ್ಕಿ ಹೊಡೆಸಿ, ಸಾಯಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಣಕಾಸಿನ ವಿಚಾರಕ್ಕಾಗಿ ತಾಯಿ ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಹೀಗಾಗಿ ತಾಯಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಪುತ್ರ ಹೇಮರಾಜ್. ಬೆಟ್ಟದಪುರ ಪೊಲೀಸರು ಆರೋಪಿ ಹೇಮರಾಜನನ್ನ ವಶಕ್ಕೆ ಪಡೆದಿದ್ದಾರೆ. ಬೆಟ್ಟದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬಾಡಿಗೆಗಾಗಿ ಟ್ರ್ಯಾಕ್ಟರ್ ಪಡೆದು ವಂಚಿಸುತ್ತಿದ್ದವರ ಅರೆಸ್ಟ್ ಮಾಡಿದ ಮಂಡ್ಯ ಪೊಲೀಸರು ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಆ ರೈತರು ಸಾಲಸೋಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ರು. ಆದ್ರೆ, ಕೊರೊನಾ ಹೊಡೆತಕ್ಕೆ ಸಿಲುಕಿದ್ದ ಅವರೆಲ್ಲ, ಟ್ರ್ಯಾಕ್ಟರ್ ಲೋನ್ ತೀರಿಸಲಾಗದೆ ಪರದಾಡ್ತಿದ್ರು. ಇದನ್ನೆ ಬಂಡವಾಳ ಮಾಡ್ಕೊಂಡಿದ್ದ ಆ ಕಿರಾತಕರು, ನಿಂತಿರೋ ಟ್ರ್ಯಾಕ್ಟರ್ಗಳೆಲ್ಲವನ್ನೂ ಕದ್ದೊಯ್ದಿದ್ದರು. ಸದ್ಯ ಮಂಡ್ಯದ ರಘುನಂದನ್ ಹಾಗೂ ಚಾಮರಾಜನಗರದ ಗುರುಶಾಂತ ಎಂಬ ಇಬ್ಬರು ಕಳ್ಳರನ್ನ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೈತರನ್ನ ವಂಚಿಸಿ ಟ್ರ್ಯಾಕ್ಟರ್ಗಳನ್ನೇ ಹೊತ್ತೊಯ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹಲವು ಗ್ರಾಮಗಳಿಗೆ ಹೋಗ್ತಿದ್ದ ಖದೀಮರು, ಟ್ರ್ಯಾಕ್ಟರ್ ತೆಗೊಂಡು ಸಾಲ ಕಟ್ಟಲಾಗದ ಒದ್ದಾಡ್ತಿದ್ದ ರೈತರನ್ನ ಹುಡುಕ್ತಿದ್ರು. ಅವ್ರಿಗೆ ಮಾತಲ್ಲೇ ಮರಳು ಮಾಡಿ, ನಮಗೆ ಟ್ರ್ಯಾಕ್ಟರ್ ಕೊಡಿ, ನಿಮ್ಮ ಟ್ರಾಕ್ಟರ್ ಗಳನ್ನ ಬೇರೆ ಕಂಪನಿಗಳಿಗೋ, ಕ್ವಾರಿಯವರಿಗೋ ಬಾಡಿಗೆ ಕೊಡ್ತಿವಿ. ನಿಮಗೆ ತಿಂಗಳು ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕೊಡಿಸ್ತಿವಿ ಅಂತ ಕಥೆ ಕಟ್ತಿದ್ರು. ನಂತರ, ಟ್ರ್ಯಾಕ್ಟರ್ ಸಿಗ್ತಿದ್ದಂತೆ ನಾಟ್ ರೀಚೆಬಲ್ ಆಗಿಬಿಡ್ತಿದ್ರು.

ಅಂದಹಾಗೇ, ಚಾಮರಾಜನಗರದಿಂದ ಕದ್ದ ಟ್ರ್ಯಾಕ್ಟರ್ಗಳನ್ನ ಮಂಡ್ಯಕ್ಕೆ ತರುತ್ತಿದ್ರು. ಇಲ್ಲಿ, ಕಡಿಮೆ ರೇಟ್ಗೆ ಯಾವುದೇ ಡ್ಯಾಕ್ಯೂಮೆಂಟ್ ನೀಡದೆ ಟ್ರ್ಯಾಕ್ಟರ್ ಮಾರುತ್ತಿದ್ರು. ಆದ್ರೆ, ಚಾಮರಾಜನಗರದಲ್ಲಿ ಆರೋಪಿಗಳಿಂದ ಟ್ರ್ಯಾಕ್ಟರ್ ಕಳ್ಕೊಂಡ ವ್ಯಕ್ತಿಯೊಬ್ರು, ಇವ್ರನ್ನ ಹುಡುಕಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ. ಅಲ್ಲಿ ಪೊಲೀಸ್ರ ಮೊರೆ ಹೋಗಿದ್ದಾರೆ. ಈ ವೇಳೆ, ಟ್ರ್ಯಾಕ್ಟರ್ ಮಾರುತ್ತಿದ್ದಾಗಲೇ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 50 ಲಕ್ಷ ಮೌಲ್ಯದ 6 ಟ್ರ್ಯಾಕ್ಟರ್ ಗಳನ್ನ ಕದ್ದಿರುವುದಾಗಿ ಬಾಯಿಬಿಟ್ಟಿದ್ದಾರೆ.

ಸದ್ಯ, ಸಂಕಷ್ಟದಲ್ಲಿದ್ದ ರೈತರನ್ನ ವಂಚಿಸ್ತಿದ್ದ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಪೊಲೀಸ್ರು ಇಬ್ಬರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಮತ್ತೆ ಬೇರೆ ಪ್ರಕರಣದಲ್ಲಿ ಬಾಗಿಯಾಗಿದ್ದಾರಾ ಎಂದು ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಬಾಲಭವನದಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಹಿಸಲು ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ, ನೇರ ಸಂದರ್ಶನ ಇದನ್ನೂ ಓದಿ: Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು

Published On - 9:04 am, Fri, 18 February 22

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್