ವಾಂಖೆಡೆ ಸ್ಟೇಡಿಯಂನಲ್ಲಿ ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಜಯಘೋಷ

|

Updated on: Jul 04, 2024 | 6:25 PM

ಎತ್ತ ನೋಡಿದರು ಕೂಡ ಜನಸಾಗರ, ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರ ಜಯಘೋಷ ಈ ದೃಶ್ಯಗಳನ್ನು ಕಂಡುಬಂದಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ. ಭಾರತ ತಂಡ ಟಿ 20 ವಿಶ್ವಕಪ್​ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಹೀಗಾಗಿ ಇಂದು ವಿಜಯಯಾತ್ರೆ ನಡೆಯುತ್ತಿದೆ. ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂನಲ್ಲಿ ಜಮಾಯಿಸಿದ್ದಾರೆ.

ಮುಂಬೈ, ಜುಲೈ 04: ಟಿ 20 ವಿಶ್ವಕಪ್ (T20 World Cup 2024) ಟ್ರೋಫಿ ಜೊತೆಗೆ ಚಾಂಪಿಯನ್ ಭಾರತ ತಂಡ ಭಾರತಕ್ಕೆ ವಾಪಸ್ ಆಗಿದೆ. ಡೆಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ತಂಡವನ್ನು ಭೇಟಿ ಮಾಡಿದ್ದಾರೆ. ಬಳಿಕ ಮುಂಬೈಗೆ ಆಗಮಿಸಿರುವ ಭಾರತ ತಂಡದ ಆಟಗಾರರು ವಿಜಯಯಾತ್ರೆ ನಡೆಸಲಿದ್ದಾರೆ. ಸದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Mumbai Wankhede Stadium) ಲಕ್ಷಾಂತರ ಕ್ರಿಕೆಟ್​ ಅಭಿಮಾನಿಗಳು ಜಮಾಯಿಸಿದ್ದಾರೆ. ಇಡೀ ಸ್ಟೇಡಿಯಂ ತುಂಬಾ ಅಭಿಮಾನಿಗಳು ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಪರ ಜಯಘೋಷ ಕೂಗಿದ್ದಾರೆ. ಸದ್ಯ ಅಭಿಮಾನಿಗಳ ಸಂಭ್ರಮ ಮಾತ್ರ ಮುಗಿಲು ಮುಟ್ಟಿದೆ. ತಮ್ಮ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಕಾತುರರಾಗಿದ್ದಾರೆ. ಸಂಜೆ 7ಗಂಟೆಯಿಂದ ವಿಜಯೋತ್ಸವ ಆರಂಭವಾಗಲಿದೆ. ವಾಂಖೆಡೆ ಮೈದಾನದಲ್ಲೇ ಬಿಸಿಸಿಐ ವತಿಯಿಂದ ಆಟಗಾರರು, ಸಿಬ್ಬಂದಿಯನ್ನು ಸನ್ಮಾನಿಸಲಿದ್ದು, ಘೋಷಿತ 125ಕೋಟಿ ರೂ. ಬಹುಮಾನ ಮೊತ್ತವನ್ನು ವಿತರಣೆ ಮಾಡಲಾಗುತ್ತೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 04, 2024 06:23 PM