ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ಪುನೀತ್ ರಾಜಕುಮಾರ್ ಅವರ ಪೋಟೋ ಫ್ರೇಮ್ ತರುವ ಅವಶ್ಯಕತೆ ಇರಲಿಲ್ಲ!
ಕನ್ನಡ ಜಲ-ನೆಲ-ಭಾಷೆಗಾಗಿ ನಡೆದ ಹೋರಾಟಗಳಲ್ಲಿ ಡಾ ರಾಜ್ ಕುಮಾರ್ ಮತ್ತು ಅವರ ಮಕ್ಕಳು ತಪ್ಪದೆ ಪಾಲ್ಗೊಂಡಿದ್ದಾರೆ ಮತ್ತು ಮುಂದಾಳತ್ವವನ್ನೂ ವಹಿಸಿದ್ದಾರೆ. ಎಲ್ಲರೂ ಇದನ್ನು ಬಲ್ಲರು. ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ನಿಸ್ಸಂದೇಹವಾಗಿ ಕನ್ನಡನಾಡಿನ ಪರ (ಜಲ) ಕಾಳಜಿ ಇದೆ. ಆದರೆ ಇದನ್ನು ಹಮ್ಮಿಕೊಂಡಿದ್ದ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ.
ಕೆಪಿಸಿಸಿ ನಡೆಸಿದ ಪಾದಯಾತ್ರೆ ಕೊನೆಗೊಂಡಿದೆ. ಗುರುವಾರ ಪಾದಯಾತ್ರೆಯ ಕೊನೆಯ ದಿನವಾಗಿದ್ದರಿಂದ ಪಾದಯಾತ್ರೆ ಜೋರಾಗಿಯೇ ನಡೆಯಿತು. ಆದಷ್ಟು ಬೇಗ ಬಸವನಗುಡಿಯ ನ್ಯಾಶನಲ್ ಕಾಲೇಜು (National College) ತಲುಪುವ ಉದ್ದೇಶವೂ ಕಾಂಗ್ರೆಸ್ ನಾಯಕರಿಗೆ ಇತ್ತು ಅಂತ ಕಾಣುತ್ತೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಇನ್ನೂ ಅನೇಕ ನಾಯಕರು ವೇಗವಾಗಿ ಹೆಜ್ಜೆ ಹಾಕುತ್ತಿರುವುದು ನಿಮಗೆ ಕಾಣಿಸುತ್ತದೆ. ಇದೇ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಪುನೀತ್ ರಾಜಕುಮಾರ (Puneet Rajkumar) ಅವರ ಫೋಟೋ ಹಿಡಿದುಕೊಂಡು ಶಿವಕುಮಾರ ಅವರಲ್ಲಿಗೆ ಬರುತ್ತಾರೆ. ಏನಿದು ಅಂತ ಕೇಳುತ್ತಾ ಡಿಕೆಶಿ ಫ್ರೇಮ್ ಮೇಲೆ ಸುತ್ತಿದ್ದ ರ್ಯಾಪರ್ ಅನ್ನು ತೆಗೆಯುತ್ತಾರೆ. ಅಪ್ಪು (Appu) ಪೋಟೋ ನೋಡಿ ಅದನ್ನು ತಮ್ಮ ಹಿಂದೆ ಇರುವವರಿಗೆ ಕೊಡುವ ಪ್ರಯತ್ನ ಮಾಡಿದಾಗ ಫೋಟೋ ತಂದ ವ್ಯಕ್ತಿಯೇ ಅದನ್ನು ತೆಗೆದುಕೊಳ್ಳುತ್ತಾರೆ.
ಈ ವ್ಯಕ್ತಿಯ ಉದ್ದೇಶವೇನಾಗಿತ್ತು ಅಂತ ಅರ್ಥವಾಗುವುದಿಲ್ಲ ಮಾರಾಯ್ರೇ. ರಾಜಕೀಯ ಪಕ್ಷವೊಂದು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಅಪ್ಪು ಅವರನ್ನು ತರುವ ಅವಶ್ಯಕತೆ ಏನಿತ್ತು? ದೊಡ್ಮನೆ ಕುಟುಂಬದ ಎಲ್ಲ ಕಲಾವಿದರು-ಅಣ್ಣಾವ್ರಿಂದ ಹಿಡಿದು ವಿನಯ್ ರಾಜಕುಮಾರವರೆಗೆ ರಾಜಕಾರಣ ಮತ್ತು ರಾಜಕೀಯ ನಾಯಕರಿಂದ ಒಂದು ಆರೋಗ್ಯಕರ ಅಂತರ ಕಾಯ್ದುಕೊಂಡಿದ್ದಾರೆ. ಆಫ್ಕೋರ್ಸ್ ಶಿವಣ್ಣನ ಪತ್ನಿ ಗೀತಾ ಅವರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ, ಅದು ಕೇವಲ ತಮ್ಮ ಸಹೋದರ ಮಧು ಬಂಗಾರಪ್ಪ ಅವರ ಒತ್ತಾಯಕ್ಕೆ.
ಕನ್ನಡ ಜಲ-ನೆಲ-ಭಾಷೆಗಾಗಿ ನಡೆದ ಹೋರಾಟಗಳಲ್ಲಿ ಡಾ ರಾಜ್ ಕುಮಾರ್ ಮತ್ತು ಅವರ ಮಕ್ಕಳು ತಪ್ಪದೆ ಪಾಲ್ಗೊಂಡಿದ್ದಾರೆ ಮತ್ತು ಮುಂದಾಳತ್ವವನ್ನೂ ವಹಿಸಿದ್ದಾರೆ. ಎಲ್ಲರೂ ಇದನ್ನು ಬಲ್ಲರು. ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ನಿಸ್ಸಂದೇಹವಾಗಿ ಕನ್ನಡನಾಡಿನ ಪರ (ಜಲ) ಕಾಳಜಿ ಇದೆ. ಆದರೆ ಇದನ್ನು ಹಮ್ಮಿಕೊಂಡಿದ್ದ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ.
ನಿಮಗೆ ನೆನಪಿರಬಹುದು. ಶಿವರಾಜಕುಮಾರ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವದಂತಿ ಹರಡಿತ್ತು. ಅದರೆ ಇದೊಂದು ರಾಜಕೀಯ ಪಕ್ಷದ ಕಾರ್ಯಕ್ರಮ ಅಂತ ಗೊತ್ತಾದ ಕೂಡಲೇ ಅವರು ದೂರವುಳಿದರು.
ಈ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ಇದರಲ್ಲಿ ಯಾಕೆ ತರಲಾಯಿತು ಅಂತ ಆ ವ್ಯಕ್ತಿಯೇ ನಮಗೆ ಹೇಳಬೇಕು. ಅವರ ಈ ಹುಚ್ಚು ಸಾಹಸದಿಂದ ಪವರ್ ಸ್ಟಾರ್ ಅತ್ಮ ನೊಂದುಕೊಂಡಿರಬಹುದು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಿಂದ ಟ್ರಾಫಿಕ್ ಜಾಮ್; ಪ್ರತಿಭಟನೆ, ಮೆರವಣಿಗೆಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ