ಬೆಂಗಳೂರಿನ (Bengaluru)ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (13th Bengaluru International Film Festival) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಮಾರ್ಚ್ 3) ಸಂಜೆ ಚಾಲನೆ ನೀಡಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ಅವರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅತಿಥಿಯಾಗಿ ಭಾರತಿ ವಿಷ್ಣುವರ್ಧನ್ ಭಾಗಿಯಾಗಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮೊದಲಾದವರು ಪಾಲ್ಗೊಂಡಿದ್ದಾರೆ. ಚಲನ ಚಿತ್ರೋತ್ಸವದ ಸಲಹಾ ಸಮಿತಿಯಲ್ಲಿ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ (Ashwini Puneeth Rajkumar) ಇದ್ದಾರೆ. ಹೀಗಾಗಿ, ಅವರು ಕೂಡ ವೇದಿಕೆ ಏರಿದ್ದರು. ಅವರು ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳಿಂದ ಚಪ್ಪಾಳೆ ಬಂತು.
ಇದನ್ನೂ ಓದಿ: ‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್ ಗನ್ಮ್ಯಾನ್ ತೆರೆದಿಟ್ಟ ವಿವರಗಳು
ಪುನೀತ್ ಮಾವ, ಅಶ್ವಿನಿ ತಂದೆ ಹೃದಯಾಘಾತದಿಂದ ನಿಧನ; ರಾಜ್ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ