ಲೂಟಿ ಮಾಡಿದ ವಾಹನಗಳಲ್ಲಿ ಶಸ್ತ್ರಸಜ್ಜಿತ ತಾಲಿಬಾನಿಗಳು ತಮ್ಮ ಆಧ್ಯಾತ್ಮಿಕ ಕೇಂದ್ರ ಕಂದಾಹಾರ್​ನಲ್ಲಿ ಪರೇಡ್ ಮಾಡಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2021 | 12:05 AM

ಕಂದಹಾರ್ ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾಗಿದ್ದು ತಾಲಿಬಾನಿಗಳ ಆಧ್ಯಾತ್ಮಿಕ ಕೇಂದ್ರವೆನಿಸಿಕೊಂಡಿದೆ. ತಾಲಿಬಾನ್ ಸಂಘಟನೆ ಉಗಮವಾಗಿದ್ದು ಇದೇ ನಗರದಲ್ಲಿ. 1999 ರಲ್ಲಿ ಭಾರತದ ವಿಮಾನವನ್ನು ಅಪಹರಿಸಿದಾಗಲು ಅದನ್ನು ಇದೇ ನಗರಕ್ಕೆ ತರಲಾಗಿತ್ತು.

ಈ ವಿಡಿಯೋ ನೋಡಿ. ಸಾಲು ಸಾಲು ಮಿಲಿಟರಿ ವಾಹನಗಳಲ್ಲಿ ಪಯಣಿಸುತ್ತಾ ತಾಲಬಾನಿಗಳು ಕೈಯಲ್ಲಿ ಬಂದೂಕುಗಳನ್ನು ಹಿರಿದು ಶಕ್ತಿ ಪ್ರದರ್ಶನ ಮಾಡುತ್ತಿದ್ದರೆ. ಅವರ ಉದ್ದೇಶವಿಷ್ಟೇ. ಅಫ್ಘಾನಿಸ್ತಾನದ ಜನ (ವಿಶೇಷವಾಗಿ ಸೇನೆ) ತಮ್ಮ ತಂಟೆಗೆ ಬರುವ ಪ್ರಯತ್ನ ಮಾಡಬಾರದು, ಬಂದರೆ ಗತಿ ಕಾಣಿಸಲು ತಮ್ಮಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ, ಉಪಯೋಗಿಸಲಲು ಹಿಂಜರಿಯಲಾರೆವು ಎಂಬ ಸಂದೇಶ ರವಾನೆಯಾಗುವಂತೆ ಮಾಡುವುದು. ಈ ವಾಹನಗಳನ್ನು ಅವರು ಲೂಟಿ ಮಾಡಿರುತ್ತಾರೆ ಇಲ್ಲವೇ ಅಮೇರಿಕನ್ ಸೇನೆಯಿಂದ ದಯಾಭಿಕ್ಷೆಯಾಗಿ ಪಡೆದಿರುತ್ತಾರೆ.

ಅಂದಹಾಗೆ, ನಿಮಗೆ ಇಲ್ಲಿ ಕಾಣುತ್ತಿರುವ ಹಾಗೆ ತಾಲಿಬಾನಿಗಳು ವಾಹನಗಳಲ್ಲಿ ಪರೇಡ್ ಮಾಡುತ್ತಿರೋದು ಕಂದಹಾರ್ ನಗರದಲ್ಲಿ. ಎಲ್ಲ ವಾಹನಗಳ ಏರಿಯಲ್​ಗಳಿಗೆ ಕಪ್ಪು ಮತ್ತು ಬಿಳಿ ಬಣ್ಣದ ತಾಲಿಬಾನ್ ದ್ವಜಗಳನ್ನು ಕಟ್ಟಲಾಗಿದೆ.

ಕಂದಹಾರ್ ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾಗಿದ್ದು ತಾಲಿಬಾನಿಗಳ ಆಧ್ಯಾತ್ಮಿಕ ಕೇಂದ್ರವೆನಿಸಿಕೊಂಡಿದೆ. ತಾಲಿಬಾನ್ ಸಂಘಟನೆ ಉಗಮವಾಗಿದ್ದು ಇದೇ ನಗರದಲ್ಲಿ. 1999 ರಲ್ಲಿ ಭಾರತದ ವಿಮಾನವನ್ನು ಅಪಹರಿಸಿದಾಗಲು ಅದನ್ನು ಇದೇ ನಗರಕ್ಕೆ ತರಲಾಗಿತ್ತು. ಇಲ್ಲಿನ ಜನಸಂಖ್ಯೆ 6 ಲಕ್ಷಕ್ಕಿಂತ ಜಾಸ್ತಿ.

ಈ ವಾಹನಗಳು, ಅಮೆರಿಕ, ನ್ಯಾಟೊ ಮತ್ತಯ ಆಫ್ಘನ್ ಸೇನೆಗಳು 20 ವರ್ಷಗಳ ಕಾಲ ನಡೆದು ಯುದ್ಧದಲ್ಲಿ ಬಳಸಿದ ವಿವಿದೊದ್ದೇಶಗಳ ವಾಹನಗಳಾಗಿವೆ.
ಪಿಕ್ ಅಪ್ ಟ್ರಕ್ಗಳಲ್ಲೂ ಶಸ್ತ್ರಧಾರಿ ತಾಲಿಬಾನಿಗಳು ಪರೇಡ್ ಮಾಡುತ್ತಿರುವುದನ್ನು ಈ ವಿಡಿಯೋನಲ್ಲಿ ನೋಡಬಹುದು. ಭಾರಿ ಪ್ರಮಾಣದ ಆಯುಧಗಳು ಮಶೀನ್ ಗನ್ಗಳು ಈ ಟ್ರಕ್ಗಳಲ್ಲಿವೆ.

ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಕನಿಷ್ಠ ಒಂದು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಕಂದಹಾರ್ ನಗರ ಪ್ರದೇಶದಲ್ಲಿ ಹಾರಾಡುತ್ತಿದೆ ಎಂದು ಹೇಳಲಾಗುತ್ತಿದೆ. ಅದರರ್ಥ ಆಫ್ಘನ್ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೆಲ ಪೈಲಟ್ ಗಳನ್ನು ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ತಾಲಿಬಾನಿಗಳಲ್ಲಿ ಒಬ್ಬೇ ಒಬ್ಬ ತರಬೇತಿ ಹೊಂದಿದ ಪೈಲಟ್ ಇಲ್ಲ.

ಇದನ್ನೂ ಓದಿ:   Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್