ವಿಧಾನಸಭೆ ಕಲಾಪದಲ್ಲಿ ಡಿಕೆ ಶಿವಕುಮಾರ್ ಮತ್ತು ಡಾ.ಅಶ್ವಥ್ ನಾರಾಯಣ್ ಮಧ್ಯೆ ಜಟಾಪಟಿ
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸತ್ಯಸಾಯಿ ಸಾಯಿ ಮೆಡಿಕಲ್ ಕಾಲೇಜಿಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ಡಿಸಿಎಂ ಡಿಕೆ, ಡಾ.ಅಶ್ವತ್ಥ್ ನಾರಾಯಣ ನಡುವೆ ವಾಗ್ವಾದ ನಡೆದಿದೆ.
ನಾಲ್ಕನೇ ದಿನದ ಕಲಾಪ ಆರಂಭವಾಗಿದ್ದು ಡಿಕೆ ಶಿವಕುಮಾರ್ ಮತ್ತು ಡಾ.ಅಶ್ವಥ್ ನಾರಾಯಣ್ ಮಧ್ಯೆ ಜಟಾಪಟಿ ನಡೆದಿದೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸತ್ಯಸಾಯಿ ಸಾಯಿ ಮೆಡಿಕಲ್ ಕಾಲೇಜಿಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ಡಿಸಿಎಂ ಡಿಕೆ, ಡಾ.ಅಶ್ವತ್ಥ್ ನಾರಾಯಣ ನಡುವೆ ವಾಗ್ವಾದ ನಡೆದಿದೆ. ಸತ್ಯಸಾಯಿ ಮೆಡಿಕಲ್ ಕಾಲೇಜು ಉಚಿತ ಚಿಕಿತ್ಸೆಗೆ ಮುಂದಾಗಿದೆ. ಯಾವ ಕೆಟ್ಟ ಹೆಸರು ಸತ್ಯಸಾಯಿ ಮೆಡಿಕಲ್ ಕಾಲೇಜಿನ ಮೇಲಿಲ್ಲ. ಸತ್ಯಸಾಯಿ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡುವಂತೆ ಶಾಸಕ ಡಾ.ಅಶ್ವತ್ಥ್ ನಾರಾಯಣ ಒತ್ತಾಯ ಮಾಡಿದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸಿ ನೀವು ಅಧಿಕಾರದಲ್ಲಿದ್ದಾಗ ಯಾಕೆ ಅನುಮತಿ ಕೊಡಲಿಲ್ಲ? ನಿಮ್ಮ ಬಳಿ ಪೆನ್ ಇತ್ತಲ್ವಾ, ಯಾಕೆ ಅನುಮತಿ ಕೊಟ್ಟಿಲ್ಲವೆಂದು ಪ್ರಶ್ನೆ ಮಾಡಿದರು. ನಿಮಗೆ ಅನುಮತಿ ಕೊಡಲು ಕಷ್ಟ ಇದೆಯಾ? ನಿಮ್ಮ ಮಾತಿನ ಅರ್ಥ ಏನು? ಅನುಮತಿ ಕೊಡಲ್ಲ ಅಂತನಾ? ಅನುಮತಿ ಕೊಡಲ್ಲ ಅಂದ್ರೆ ಹೇಳಿ, ಫ್ರೀ ಅಡ್ಮಿಷನ್ ಮಾಡ್ತಿದ್ದಾರೆ. ನೀವು ಗ್ಯಾರಂಟಿಗಳನ್ನು ಕೊಡುತ್ತೇವೆ ಅಂತಾ ಹೇಳಿ ಕೊಡಲಿಲ್ಲ. ನಿಮ್ಮ ನೋಡಿ ಅಧಿಕಾರ ಕೊಟ್ಟಿಲ್ಲ, ಗ್ಯಾರಂಟಿ ನೋಡಿ ಕೊಟ್ಟಿದ್ದಾರೆ. ಬರೀ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ಇದು ಅಹಂ ಮಾತು ಎಂದು ಡಾ.ಅಶ್ವತ್ಥ್ ನಾರಾಯಣ್ ಗರಂ ಆದ್ರು.