ಕತೆ ಮಾಡಲು ಉಮಾಪತಿ ಶ್ರೀನಿವಾಸ್ ಹಣ ಕೊಟ್ಟಿದ್ದರೆ: ತರುಣ್ ಹೇಳಿದ್ದೇನು?
Umapathy Srinivas-Darshan: ಉಮಾಪತಿ ಶ್ರೀನಿವಾಸ್ ಅವರು ಹಣ ಕೊಟ್ಟು ‘ಕಾಟೇರ’ ಸಿನಿಮಾದ ಕತೆ ಮಾಡಿಸಿದ್ದರೆ? ನಿರ್ದೇಶಕ ತರುಣ್ ಸುಧೀರ್ ಉತ್ತರ ನೀಡಿದ್ದಾರೆ.
‘ಕಾಟೇರ’ (Kaatera) ಸಿನಿಮಾದ ಕತೆಯನ್ನು ಮಾಡಿಸಿದ್ದು ತಾವೆಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಹೇಳಿದ್ದು, ನಟ ದರ್ಶನ್ಗೆ ಆಕ್ರೋಶ ತಂದಿದೆ. ಇದೀಗ ‘ಕಾಟೇರ’ ಸಿನಿಮಾದ ನಿರ್ದೇಶಕ, ಚಿತ್ರಕತೆ ಬರಹಗಾರ ತರುಣ್ ಸುಧೀರ್ ಇದೀಗ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ‘ಕಾಟೇರ’ ಸಿನಿಮಾದ ಕತೆ ಮಾಡಲು ಉಮಾಪತಿ ಶ್ರೀನಿವಾಸ್ ಹಣ ಕೊಟ್ಟಿದ್ದರೆ ಎಂಬ ಬಗ್ಗೆಯೂ ತರುಣ್ ಮಾತನಾಡಿದ್ದಾರೆ. ‘ಕಾಟೇರ’ ಸಿನಿಮಾದ ಕತೆ ರೆಡಿ ಆಗಿತ್ತು, ಆದರೆ ಅದನ್ನು ನನ್ನ ತಂಡಕ್ಕೆ ವಿವರಿಸಿ ಅವರನ್ನು ಸಜ್ಜು ಮಾಡಬೇಕಿತ್ತು. ಇದಕ್ಕಾಗಿ ನಾವು ಶ್ರವಣ ಬೆಳಗೊಳದ ಬಳಿಯ ರೆಸಾರ್ಟ್ಗೆ ಹೋಗಿ ಮೂರು ದಿನ ಉಳಿದಿದ್ದೆವು. ಅಲ್ಲಿನ ಬಿಲ್ 75 ಸಾವಿರ ರೂಪಾಯಿಗಳಾಗಿತ್ತು. ಅದನ್ನು ಉಮಾಪತಿ ಶ್ರೀನಿವಾಸ್ ಅವರು ಕೊಟ್ಟಿದ್ದರು ಎಂದು ಹೇಳಿದ್ದಾರೆ. ವಿವಾದದ ಬಗ್ಗೆ ತರುಣ್ ಸುಧೀರ್ ವಿವರವಾಗಿ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ