‘ಕಾಟೇರ’ ಸಿನಿಮಾಕ್ಕೆ ಮೊದಲು ಇಡಬೇಕಿಂದಿದ್ದ ಹೆಸರು ಬೇರೆಯೇ ಇತ್ತು
Kaatera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಸುತ್ತ ವಿವಾದಗಳು ಸುತ್ತಿಕೊಂಡಿವೆ. ಅಸಲಿಗೆ ‘ಕಾಟೇರ’ ಸಿನಿಮಾಕ್ಕೆ ಬೇರೊಂದು ಹೆಸರನ್ನು ಇಡಲು ಉದ್ದೇಶಿಸಿದ್ದರಂತೆ ನಿರ್ದೇಶಕ ತರುಣ್ ಸುಧೀರ್, ಆ ಹೆಸರು ಯಾವುದು? ಅದು ಬದಲಾಗಿದ್ದು ಯಾಕೆ?
‘ಕಾಟೇರ’ (Kaatera) ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ. ಅದರ ಬೆನ್ನಲ್ಲೆ ಕೆಲವು ವಿವಾದಗಳು ಸಿನಿಮಾ ಅನ್ನು ಸುತ್ತಿಕೊಂಡಿವೆ. ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಬಗ್ಗೆ ದರ್ಶನ್ (Darshan) ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಬಿಸಿ-ಬಿಸಿ ಮಾತುಗಳು ಅದಲು-ಬದಲಾಗಿವೆ. ಇದೀಗ ‘ಕಾಟೇರ’ ಸಿನಿಮಾದ ನಿರ್ದೇಶಕ ತರುಣ್ ಸುಧೀರ್, ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ‘ಕಾಟೇರ’ ಸಿನಿಮಾದ ಕತೆ ಮಾಡಿದಾಗ ಅದಕ್ಕೆ ಇಡಬೇಕೆಂದಿದ್ದ ಹೆಸರು ಬೇರೆಯೇ ಆಗಿತ್ತಂತೆ. ತರುಣ್ ಸುಧೀರ್ ‘ಕಾಟೇರ’ ಸಿನಿಮಾಕ್ಕೆ ‘ಚೌಡಯ್ಯ’ ಎಂದು ಹೆಸರಿಟ್ಟಿದ್ದರಂತೆ. ಆದರೆ ‘ಕಾಟೇರ’ ಹೆಸರು ಸೂಚಿಸಿದ್ದು ನಟ ದರ್ಶನ್. ಅದಕ್ಕೆ ಕಾರಣವನ್ನೂ ಸಹ ತರುಣ್ ಸುಧೀರ್ ಟಿವಿ9 ಜೊತೆಗಿನ ಮಾತುಕತೆಯಲ್ಲಿ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

