Hubballi: ಖುದ್ದು ರಾಷ್ಟ್ರಧ್ವಜ ಉಲ್ಟಾ ಹಿಡಿದ ಎಬಿವಿಪಿ ಮುಖಂಡ ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತೀಯಾ ಅಂತ ಇನ್ಸ್​ಪೆಕ್ಟರ್​ಗೆ ದಬಾಯಿಸಿದ!

Hubballi: ಖುದ್ದು ರಾಷ್ಟ್ರಧ್ವಜ ಉಲ್ಟಾ ಹಿಡಿದ ಎಬಿವಿಪಿ ಮುಖಂಡ ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತೀಯಾ ಅಂತ ಇನ್ಸ್​ಪೆಕ್ಟರ್​ಗೆ ದಬಾಯಿಸಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 21, 2024 | 6:11 PM

ಪ್ರತಿಭಟನೆ ನಡೆಸುವ ಅವಕಾಶ ಮತ್ತು ಹಕ್ಕು ಎಲ್ಲರಿಗೂ ಇದೆ, ಆದರೆ ಅದು ಶಾಂತಿಯುತವಾಗಿರಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದು. ಆದರೆ, ಪೃಥ್ವಿ ರೆಡ್ಡಿ ಹೆಸರಿನ ಮುಖಂಡನ ನೇತೃತ್ವದ ಈ ಪ್ರತಿಭಟನೆಕಾರರು ಹೆದ್ದಾರಿಗೆ ಬಂದ ಕಾರಣ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮಂತ ಪಾಟೀಲ್, ಹೆದ್ದಾರಿಯಲ್ಲಿ ಪ್ರತಿಭಟನೆ ಬೇಡ, ಪಕ್ಕದ ಮೈದಾನದಲ್ಲಿ ಮಾಡಿ ಅಂತ ನಯವಾಗೇ ಸಭ್ಯ ಭಾಷೆಯಲ್ಲಿ ಹೇಳುತ್ತಾರೆ.

ಹುಬ್ಬಳ್ಳಿ: ನಾಡಗೀತೆಗೆ (State Anthem) ಸಂಬಂಧಿಸಿದ ಆದೇಶದಲ್ಲಿ ಆಗಿದ್ದ ಪ್ರಮಾದವನ್ನು ಕರ್ನಾಟಕ ಸರ್ಕಾರ ತಿದ್ದುಪಾಟು ಮಾಡಿ, ಎಲ್ಲ ಶಾಲೆಗಳಲ್ಲಿ ಅಂದರೆ ಸರ್ಕಾರೀ, ಅನುದಾನಿತ, ಅನುದಾನರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವ ಮೊದಲು ರಾಷ್ಟ್ರಕವಿ ಕುವೆಂಪು (Rashtrakavi Kuvempu) ವಿರಚಿತ ನಾಡಗೀತೆ, ಜಯ ಭಾರತ ಜನನಿಯ ತನುಜಾತೆ ಕಡ್ಡಾಯವಾಗಿ ಹಾಡಬೇಕೆಂದು ಹೇಳಿದೆ. ಸರ್ಕಾರದ ಮೊದಲಿನ ಅದೇಶದ ವಿರುದ್ಧ ಹುಬ್ಭಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರು (ABVP activists) ಪ್ರತಿಭಟನೆ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರತಿಭಟನೆ ನಡೆಸುವ ಅವಕಾಶ ಮತ್ತು ಹಕ್ಕು ಎಲ್ಲರಿಗೂ ಇದೆ, ಆದರೆ ಅದು ಶಾಂತಿಯುತವಾಗಿರಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದು. ಆದರೆ, ಪೃಥ್ವಿ ರೆಡ್ಡಿ ಹೆಸರಿನ ಮುಖಂಡನ ನೇತೃತ್ವದ ಈ ಪ್ರತಿಭಟನೆಕಾರರು ಹೆದ್ದಾರಿಗೆ ಬಂದ ಕಾರಣ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮಂತ ಪಾಟೀಲ್, ಹೆದ್ದಾರಿಯಲ್ಲಿ ಪ್ರತಿಭಟನೆ ಬೇಡ, ಪಕ್ಕದ ಮೈದಾನದಲ್ಲಿ ಮಾಡಿ ಅಂತ ನಯವಾಗಿ ಸಭ್ಯ ಭಾಷೆಯಲ್ಲಿ ಹೇಳುತ್ತಾರೆ.

ಅಷ್ಟಕ್ಕೆ ರೇಗಾಡಲು ಶುರುಮಾಡುವ ರೆಡ್ಡಿ, ನಾಡಗೀತೆಗೆ ಅವಮಾನ ಮಾಡ್ತೀಯ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತೀಯ ಅಂತ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಏಕವಚನದಲ್ಲಿ ದಬಾಯಿಸಲು ಶುರು ಮಾಡುತ್ತ್ತಾನೆ. ಅಸಲಿಗೆ ಇನ್ಸ್ ಪೆಕ್ಟರ್ ಗದರುವ ಭಾಷೆ ಬಳಸಿಲ್ಲ, ವಿಡಿಯೋದಲ್ಲಿ ನೋಡಬಹುದು. ಗಮನಿಸಬೇಕಾದ ಸಂಗತಿಯೆಂದರೆ, ಪೃಥ್ವಿರೆಡ್ಡಿ ತಾನೇ ಖುದ್ದು ರಾಷ್ಟ್ರಧ್ವಜವನ್ನು ಉಲ್ಟಾ ಹಿಡಿದು ಅದಕ್ಕೆ ಅವಮಾನ ಮಾಡುತ್ತಾನೆ ಮತ್ತು ಸುಖಾಸುಮ್ಮನೆ ಇನ್ಸ್ ಪೆಕ್ಟರ್ ಮೇಲೆ ಕಳಂಕ ಮೆತ್ತಲು ಪ್ರಯತ್ನಿಸುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ