VIDEO: ಪಾಕ್ಗೆ ಭಾರೀ ಮುಖಭಂಗ: ಟ್ರೋಫಿ ಸ್ವೀಕರಿಸದೇ ಸಂಭ್ರಮಿಸಿದ ಟೀಮ್ ಇಂಡಿಯಾ
Team India's Celebration Without Trophy: ಈ ನಿರಾಕರಣೆಯ ಹೊರತಾಗಿಯೂ ಭಾರತ ತಂಡ ಟ್ರೋಫಿ ಇಲ್ಲದೆ ಸಂಭ್ರಮಿಸಿರುವುದು ವಿಶೇಷ. ಇದೀಗ ಟ್ರೋಫಿ ಇಲ್ಲದೇ ಟೀಮ್ ಇಂಡಿಯಾ ಸೆಲೆಬ್ರೇಷನ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತ ಭಾರತ ತಂಡದ ಈ ನಡೆಗೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಭಾರತ ತಂಡ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿಲ್ಲ ಎಂಬುದು ವಿಶೇಷ. ಅಂದರೆ ಈ ಬಾರಿ ಏಷ್ಯಾಕಪ್ ಟ್ರೋಫಿ ಇಲ್ಲದೆ ಟೀಮ್ ಇಂಡಿಯಾ ಸಂಭ್ರಮಿಸಿದೆ. ಇದಕ್ಕೆ ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಪಾಕಿಸ್ತಾನದವರಾಗಿರುವುದು.
ಹೌದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ. ಅಷ್ಟೇ ಅಲ್ಲದೆ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ನಿರಾಕರಿಸಿದೆ.
ಇದಕ್ಕೂ ಮುನ್ನ ಪಹಲ್ಗಾಮ್ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾ ಆಟಗಾರರು ಪಾಕ್ ಪ್ಲೇಯರ್ಸ್ ಜೊತೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದೀಗ ಇದೇ ನಿಲುವನ್ನು ಮುಂದುವರೆಸಿ ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಪಡೆಯಲು ಒಲ್ಲೇ ಎಂದಿದ್ದಾರೆ. ಇದರಿಂದ ಇದೀಗ ಪಾಕಿಸ್ತಾನ್ ಭಾರೀ ಮುಖಭಂಗ ಅನುಭವಿಸಿದೆ.
ಇನ್ನು ಈ ನಿರಾಕರಣೆಯ ಹೊರತಾಗಿಯೂ ಭಾರತ ತಂಡ ಟ್ರೋಫಿ ಇಲ್ಲದೆ ಸಂಭ್ರಮಿಸಿರುವುದು ವಿಶೇಷ. ಇದೀಗ ಟ್ರೋಫಿ ಇಲ್ಲದೇ ಟೀಮ್ ಇಂಡಿಯಾ ಸೆಲೆಬ್ರೇಷನ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತ ಭಾರತ ತಂಡದ ಈ ನಡೆಗೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
