ಬೀದರ್ ಉಗ್ರ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಾಗೃತಿ ಅಭಿಯಾನ ಆರಂಭಿಸಿದ ಟೀಮ್ ಯತ್ನಾಳ್!
ಬಸನಗೌಡ ಯತ್ನಾಳ್ ಜಾಗೃತಿ ಅಭಿಯಾನ ಆರಂಭಿಸುವ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೆರಡು ತಂಡಗಳನ್ನು ರಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಇತರ ನಾಯಕರು ಪ್ರತ್ಯೇಕ ಹೋರಾಟ ನಡೆಸುವ ಬದಲು ಯತ್ನಾಳ್ ಅವರೊಂದಿಗೆ ಕೈ ಜೋಡಿಸಬೇಕಿತ್ತೆಂದು ಪಕ್ಷದ ನಾಯಕರೇ ಹೇಳುತ್ತಿದ್ದಾರೆ.
ಬೀದರ್: ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಕ್ಷದ ರೆಬೆಲ್ ನಾಯಕರ ಜನಾಂದೋಲನ ಇಂದಿನಿಂದ ಬೀದರ್ ಜಿಲ್ಲೆಯಿಂದ ಶುರುವಾಗಿದೆ. ನಾಯಕರು ನಗರದ ಐತಿಹಾಸಿಕ ದೇವಸ್ಥಾನವಾಗಿರುವ ಉಗ್ರ ನರಸಿಂಹನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಭಿಯಾನ ಶುರುಮಾಡಿದರು. ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರ ಮೊದಲಾದ ಹಲವಾರು ನಾಯಕರು ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೇಣುಕಾಚಾರ್ಯ ಯಾರೆಂದೇ ಗೊತ್ತಿಲ್ಲ; ಬಸನಗೌಡ ಯತ್ನಾಳ್ ಲೇವಡಿ