ಸಿಎಂರನ್ನು ಗೇಲಿ ಮಾಡಿ ದೊಡ್ಡ ನಾಯಕನಾಗುತ್ತೇನೆ ಅಂತ ಚಲವಾದಿ ಭಾವಿಸಿದ್ದರೆ ಭ್ರಮೆಯಲ್ಲಿದ್ದಾರೆ: ಚಲುವರಾಯಸ್ವಾಮಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಕ್ಕೆ ಸಿದ್ದರಾಮಯ್ಯ ಏನೆಲ್ಲ ನೆರವು ಮಾಡಿಕೊಟ್ಟಿದ್ದಾರೆ ಅಂತ ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು, ಆ ಸಮುದಾಯಗಳಿಗೆ 18 ಪರ್ಸೆಂಟ್ ಮೀಸಲಾತಿಯನ್ನು ತಂದಿದ್ದು ಸಿದ್ದರಾಮಯ್ಯ, ಅದಲ್ಲದೆ ಯಾವ ಬಾಬತ್ತಿನ ಹಣವನ್ನು ಯಾವ ಯೋಜನೆಗೆ ಖರ್ಚು ಮಾಡಬೇಕೆನ್ನುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು, ಮಾರ್ಚ್ 6: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಚಲವಾದಿ (Narayana Swamy Chalavadi) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಡಿನೋವಿನ ವಿಷಯದಲ್ಲಿ ಗೇಲಿ ಮಾತಾಡಿದ್ದು, ಅವರ ನೋವನ್ನು ಅಪಹಾಸ್ಯ ಮಾಡಿದ್ದು ಸರಿಯಲ್ಲ, ಹಾಗೆ ಮಾತಾಡಿ ತಾನು ಒಬ್ಬ ಲೀಡರ್ ಅಂತ ಕರೆಸಿಕೊಳ್ಳುತ್ತೇನೆ ಅಂತ ಭಾವಿಸಿದ್ದರೆ ಭ್ರಮೆಯಿಂದ ಹೊರಬರಬೇಕು ಎದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಕುಟುಂಬ ಇದ್ದರೆ ಅದು ದೇವೇಗೌಡರದ್ದು ಮಾತ್ರ: ಎನ್ ಚಲುವರಾಯಸ್ವಾಮಿ