ಹೈಕೋರ್ಟ್ ಆದೇಶಗಳಿಗೂ ವಿರೋಧಪಕ್ಷದ ನಾಯಕರು ಬೆಲೆ ಕೊಡೋದಿಲ್ಲವೆಂದರೆ ಹೇಗೆ? ಎನ್ ಚಲುವರಾಯಸ್ವಾಮಿ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಕೇಂದ್ರ ಸಚಿವ ಹೆಚ್ ಕುಮಾರಸ್ವಾಮಿ ಹೇಳಿರುವುದಕ್ಕೆ ಉತ್ತರಿಸಿದ ಚಲುವರಾಯಸ್ವಾಮಿ ಆಧಿಕಾರವನ್ನು ದುರುಪಯೋಗ ಮಾಡಿಕೊಂಡು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ನ್ಯಾಯಾಲಯದ ತೀರ್ಪುಗಳಿಗೆ ಬದ್ಧರಾಗಿ ನಡೆಯುತ್ತಿದ್ದಾರೆ ಎಂದರು.
ಬೆಂಗಳೂರು: ಮುಡಾ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿದಾಗಲೇ ಮುಖ್ಯಮಂತ್ರಿ ಸಿದ್ದಾರಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಗುವ ಬಗ್ಗೆ ಗೊತ್ತಿತ್ತು ಎಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಎನ್ ಚಲವರಾಯಸ್ವಾಮಿ, ಲೋಕಾಯುಕ್ತ ಸರ್ಕಾರದ ಅಧೀನದಲ್ಲಿರಬಹುದು, ಅದರೆ ಹೈಕೋರ್ಟ್ ಸಹ ಸರ್ಕಾರದ ಅಧೀನದಲ್ಲಿದೆಯೇ? ಇವರು ಕೋರ್ಟ್ ಆದೇಶಗಳಿಗೂ ಬೆಲೆ ನೀಡದೆ ಅವುಗಳನ್ನು ಪ್ರಶ್ನಿಸುತ್ತಾರೆಂದರೆ ಏನು ಹೇಳಬೇಕು? ವಿರೋಧ ಪಕ್ಷಗಳ ನಾಯಕರು ಮೊಂಡಿಗೆ ಬಿದ್ದಿದ್ದಾರೆಂದು ಹೇಳದೆ ವಿಧಿಯಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಣದ ಕೈಗಳ ಆಗ್ರಹದ ಮೇರೆಗೆ ಮುಡಾ ಪ್ರಕರಣವನ್ನು ತನಿಖೆ ಸಿಬಿಐಗೆ ಒಪ್ಪಿಸಬೇಕೆಂದಿದ್ದಾರೆಂದು ಕೋರ್ಟ್ ಭಾವಿಸಿದೆ: ಸಿಎಂ ಪರ ವಕೀಲ
Latest Videos