ಕಾಣದ ಕೈಗಳ ಆಗ್ರಹದ ಮೇರೆಗೆ ಮುಡಾ ಪ್ರಕರಣವನ್ನು ತನಿಖೆ ಸಿಬಿಐಗೆ ಒಪ್ಪಿಸಬೇಕೆಂದಿದ್ದಾರೆಂದು ಕೋರ್ಟ್ ಭಾವಿಸಿದೆ: ಸಿಎಂ ಪರ ವಕೀಲ
ಲೋಕಾಯುಕ್ತ ತನಿಖೆಗೆ ಪ್ರಕರಣವನ್ನು ನೀಡಬೇಕೆಂದು ಖುದ್ದು ದೂರುದಾರ ಸ್ನೇಹಮಯಿ ಕೃಷ್ಣ ಅವರೇ ಕೋರಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ತಿಗೊಳಿಸಿ ವರದಿಯನ್ನು ಸಲ್ಲಿಸಬೇಕೆಂದು ನಿರ್ದೇಶಿಸಿದ ಒಂದು ತಿಂಗಳು ಬಳಿಕ ಕೃಷ್ಣ ಅವರು ಲೋಕಾಯುಕ್ತ ತನಿಖೆ ಬೇಡ ಸಿಬಿಐ ತನಿಖೆಗೆ ಪ್ರಕರಣ ನೀಡಿ ಎಂದು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ ಎಂದು ಶಿವಣ್ಣ ಹೇಳಿದರು.
ಬೆಂಗಳೂರು: ಮುಡಾ ಪ್ರಕರಣದಲ್ಲಿ ಇಂದು ರಾಜ್ಯ ಹೈಕೋರ್ಟ್ ತೀರ್ಪೊಂದನ್ನು ನೀಡಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲವೆಂದು ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದ್ದು ಹೇಗೆ ಅನ್ನೋದನ್ನು ಅವರ ವಕೀಲ ಶತಾಬಿಶ್ ಶಿವಣ್ಣ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಲೋಕಾಯುಕ್ತ ನಡೆಸಿರುವ ಸಮಗ್ರ ತನಿಖೆ ಮತ್ತು ವರದಿಯನ್ನು ಹೈಕೋರ್ಟ್ ಪರಿಶೀಲಿಸಿ ತನಿಖೆ ಸೂಕ್ತವಾಗಿ ನಡೆದಿದೆ, ಲೋಕಾಯುಕ್ತ ಒಂದು ಸಾಂಸ್ಥಿಕ ಸ್ವಾಯತ್ತ ಸಂಸ್ಥೆಯಾಗಿದೆ ಮತ್ತು ದೂರುದಾರ ಸಿಬಿಐ ತನಿಖೆಯನ್ನು ಒಪ್ಪಿಸಬೇಕೆಂದು ಕೋರುತ್ತಿರುವುದು ಕಾಣದ ಕೈಗಳ ನಿರ್ದೇಶನದ ಮೇರೆಗೆ ಅನ್ನೋದು ಸ್ಪಷ್ಟವಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ ಎಂದು ಶಿವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕು ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ ಇದೆ: ಸ್ನೇಹಮಯಿ ಕೃಷ್ಣ